ಅಫ್ಜಲಪುರ :ತಾಲೂಕಿನ ಘತ್ತರಗಿ ಗ್ರಾಮದ ಶ್ರೀ ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮ ಉದ್ದೇಶಿಸಿ ಮಾಜಿ ಗ್ರಾಮ ಪಂ ಅಧ್ಯಕ್ಷರಾದ ವಿಠ್ಠಲ ನಾಟಿಕಾರ,ಗ್ರಾಮ ಪಂ ಸದಸ್ಯರಾದ ವಿಠ್ಠಲ ಇಸ್ಪುರ,ಸೈನಿಕ ಮಹೇಶ ಹವಳಗಾ ಮಾತನಾಡಿದರು. ಸಾನಿಧ್ಯವಹಿಸಿ ಶಿವಲಿಂಗ ಶರಣರು ಆಶಿರ್ವಚನ ನೀಡಿದರು.
ಈ ಸಂದರ್ಭದಲ್ಲಿ ಭೀಮಾಶಂಕರ ಹೂಗಾರ,ಲಕ್ಕಪ್ಪ ನಿಂಬರಗಿ, ಶ್ರೀಶೈಲ ಕುರಿ, ಭಾಗಪ್ಪ ಮಾಂಗ, ಬಾಬು ಪಟೇಲ,ಮಹಾಂತೇಶ ಬಟ್ಟರಕಿ,ಮಾದೇವಪ್ಪ ಪೂಜಾರಿ, ಸಚಿನ ಹವಳಗಾ,ಕಾ ನಿ ಪ ಉಪಾಧ್ಯಕ್ಷ ಬೀರಪ್ಪ ಹೊಸೂರ,ಮಹಾಂತೇಶ ಹುಲ್ಲೂರ, ಶಿಕ್ಷಕ ಮೈಬೂಬ ನರಬೋಳ, ದವಲಸಾಬ ಮನಿಯಾರ, ಶಿವಕುಮಾರ ಹೂಗಾರ, ಮಲ್ಲಿಕಾರ್ಜುನ ಕಡಕೋಳ,ಯಲ್ಲಮ್ಮ ಆರೇಕರ, ವಿಜಯಲಕ್ಷ್ಮಿ ಪೂಜಾರಿ, ರಾಣಿ ಕಲಶೆಟ್ಟಿ, ಐಶ್ವರ್ಯ ಸೋಮಜಾಳ, ಕುಲಸುಮ್ಮ ಪಟೇಲ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರವಿಕಿರಣ ಬೆಟ್ಟದಜವರಿ ಸೌಮ್ಯ ಪಟ್ನೆ ನಿರೂಪಿಸಿದರು ವಂದಿಸಿದರು.

More Stories