ಭಟ್ಕಳ– ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಷ್ಠ ಬಂಧ ಬ್ರಹ್ಮ ಕಲಶೋತ್ಸವ ಮೂರನೇ ದಿನ ದ.ಕ.ಜಿಲ್ಲೆಯ ಬಂಟ್ವಾಳದ ಪದಯಾನ ತಂಡದ ನೃತ್ಯಾರ್ಪಣಂ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದುಷಿ ಶ್ರೀಮತಿ ಪ್ರಣತಿ ಚೈತನ್ಯ ಪದ್ಯಾಣ ಇವರ ನೇತೃತ್ವದಲ್ಲಿ ನಡೆದ ಒಂದುವರೆ ಗಂಟೆಗಳ ನೃತ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ಭಕ್ತಿ ಪರವಶಗೊಳಿಸಿತು.
ಗುರುಗಳ ಜೊತೆ ಅವನಿ ಕೋಡಿಬೈಲು, ದೇವಿಕಾ ಕುರಿಯಾಜೆ,ಹೇಮಸ್ವಾತಿ ಕುರಿಯಾಜೆ ಇವರುಗಳು ನಡೆಸಿಕೊಟ್ಟ ದಶಾವತಾರ ನೃತ್ಯ ರೂಪಕವಂತೂ ಮೈನವಿರೇಳಿಸುವ ಅನುಭವ ನೀಡಿತು. ಕಾರ್ಯಕ್ರಮದ ನಂತರ ದೇವಸ್ಥಾನ ದ ವತಿಯಿಂದ ಅಧ್ಯಕ್ಷರಾದ ಎಸ್ ಬಿ.ಬೊಮ್ಮಾಯ ಸಮಿತಿ ಸದಸ್ಯರು ಹಾಗೂ ಕಾರ್ಯಕ್ರಮ ಆಯೋಜಕರು ಸೇರಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ