ಶಿರಸಿ: ತಾಲೂಕಿನ ಸೋಂದಾ ಮೂಲದ ಅರ್ಚನಾ ಹೆಗಡೆ ಅವರು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಭಾಷಾ ಮತ್ತು ಸಾಹಿತ್ಯ ವಿಭಾಗದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ವಿಶ್ವವಿದ್ಯಾಲಯದ 12ನೇ ಮತ್ತು 13ನೇ ದೀಕ್ಷಾಂತ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರಿಂದ ಈ ಪದವಿ ಪ್ರದಾನ ಮಾಡಲಾಯಿತು.
ಡಾ. ಅರ್ಚನಾ ಹೆಗಡೆ ಅವರು “ಸಂಸ್ಕೃತ ಸಾಹಿತ್ಯಕ್ಕೆ ಕಾಶ್ಮೀರ ಕವಿಗಳ ಕೊಡುಗೆ ಮತ್ತು ಐತಿಹಾಸಿಕ ಅಧ್ಯಯನ” ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿ ಈ ಗೌರವಕ್ಕೆ ಪಾತ್ರರಾದರು. ಈ ಸಂಶೋಧನೆಯನ್ನು ವಿದ್ವಾನ್ ಗಂಗಾಧರ ಭಟ್ ಮತ್ತು ಡಾ. ಕೃಷ್ಣ ಜೋಶಿ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿದ್ದಾರೆ.
ಸೋಂದಾ ಗ್ರಾಮದ ಕಲಗದ್ದೆಯ ಗಂಗಾ ಮತ್ತು ಗಜಾನನ ಹೆಗಡೆ ದಂಪತಿಯ ಪುತ್ರಿಯಾಗಿರುವ ಅರ್ಚನಾ ಹೆಗಡೆ, ಪ್ರಸ್ತುತ ಬೆಂಗಳೂರಿನ ದೀಕ್ಷಾ ಕಾಲೇಜು, ಜೈನ್ ಕಾಲೇಜು ಹಾಗೂ ಎನ್.ಎಂ.ಕೆ.ಆರ್.ವಿ. ಬಿ.ಎಡ್ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭರತನಾಟ್ಯ ಕಲೆಯಲ್ಲಿಯೂ ಆಸಕ್ತಿ ಹೊಂದಿರುವ ಅವರು, ಬೆಂಗಳೂರಿನ ಶಶಿಧರ್ ಸಿ.ವಿ. ಅವರ ಪತ್ನಿಯಾಗಿದ್ದು, ಇಬ್ಬರು ಮಕ್ಕಳ ತಾಯಿಯಾಗಿದ್ದರೂ ವಿದ್ಯಾಭ್ಯಾಸವನ್ನು ಮುಂದುವರಿಸಿ ಈ ಸಾಧನೆ ಸಾಧಿಸಿದ್ದಾರೆ.

About The Author


More Stories
ಕಸ್ತೂರಿ ರಂಗನ್ ವರದಿ: ಸೂಕ್ಷ್ಮ ಪ್ರದೇಶ ಅಧ್ಯಯನಕ್ಕೆ ಸಮಿತಿ ರಚನೆ ಹಾಗೂ ಜನವಸತಿ ಪ್ರದೇಶ ಮುಕ್ತಗೊಳಿಸಲು ರವೀಂದ್ರ ನಾಯ್ಕ ಆಗ್ರಹ
ಶಿರಸಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ವರದಿ ತಿರಸ್ಕರಿಸಲು ಹಕ್ಕು ಒತ್ತಾಯ
ನದಿ ತಿರುವು ಯೋಜನಾ ವಿರೋಧಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ: ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ