May 1, 2026

ವಿಜೃಂಭಣೆಯಿಂದ ಸಂಪನ್ನ ಗೊಂಡ ಮಂಕಾಳಮ್ಮ ದೇವಿಯ ಬಂಡಿ ಹಬ್ಬ


ಹೊನ್ನಾವರ: ಪಟ್ಟಣದ ಸ್ವರ್ಣಪುರಾಧಿಶ್ವರಿ ಶ್ರೀ ಮಹಾಕಾಳಿ (ಮಂಕಾಳಮ್ಮ) ದೇವಿಯ ವಾರ್ಷಿಕ ಬಂಡಿ ಹಬ್ಬವು ವಿಜೃಂಭಣೆಯಿಂದ ಸಂಪನ್ನಗೊಂಡಿತು.


ಒಂಬತ್ತು ದಿನಗಳವರೆಗೆ ದೇವಸ್ಥಾನದ ಧರ್ಮದರ್ಶಿ ರಾಜು ಭಂಡಾರಿ ಯವರ ನೇತೃತ್ವದಲ್ಲಿ ನಡೆದ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಂದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಶ್ರಿ ದೇವಿಯ ದರ್ಶನ ಪಡೆದರು. ಪಂಚಮಿಗೆ ಕಳಶವು ಕಳಶ ಕಟ್ಟೆಗೆ ಬಂದು, ತದ ನಂತರದಲ್ಲಿ ಕಳಶವು ನಗರ ಸಂಚಾರ ಮಾಡುವುದು, ಮತ್ತು ಮಾರಿಯಮ್ಮ ಮೂರ್ತಿಯು ಕಟ್ಟೆಗೆ ಬಂದ ನಂತರ ಅಲ್ಲಿಯೇ ತಾಯಿಗೆ ಉಡಿ ಸಮರ್ಪಿಸುವುದು ವಿಶೇಷ ಕಾರ್ಯಕ್ರಮದಲ್ಲಿ ಮುತೈದೆಯರು ಪಾಲ್ಗೊಂಡರು. ಕೊನೆಯ ಎರಡು ದಿನ 9 ದಿನಗಳಿಂದ ವ್ರತಾನುಷ್ಟ ಕಟ್ಟಿಗೆದಾರರಿಂದ ಕೆಂಡ ಸೇವೆ ನಡೆಯಿತು. ಜಿಲ್ಲೆ ಹೊರಜಿಲ್ಲೆಯಿಂದ ಆಗಮಿಸಿದ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.


ಈ ಸಂದರ್ಭದಲ್ಲಿ ಮೋಹನ, ಸುರೇಶ, ಅಕ್ಷಯ, ದಯಾನಂದ, ನರೇಶ, ಮೋಹನ ಭಟ್, ನಂದು ಭಟ್, ಸಾಯಿನಾಥ್, ಸಚಿನ್, ಪ್ರಶಾಂತ ಮಡಿವಾಳ, ಗಣಪತಿ ಅಂಬಿಗ, ಮುಂತಾದವರು ಉಪಸ್ಥಿತರಿದ್ದರು.

About The Author

error: Content is protected !!