May 1, 2026

‘ಸಂಸ್ಕಾರ ಸುಧಾ’ ಗ್ರೀಷ್ಮ ಶಿಬಿರ ಸಮಾರೋಪ


ಶಿರಸಿ: ಶ್ರೀ ಮಹಾಗಣಪತಿ, ಶಾರದಾಂಬೆ ಹಾಗೂ ಶೃಂಗೇರಿ ಉಭಯ ಜಗದ್ಗುರುಗಳ ಅನುಗ್ರಹದಿಂದ ನಗರದ ಆದರ್ಶನಗರದಲ್ಲಿರುವ ಶ್ರೀ ವರದಮೂರ್ತಿ ಮಹಾಗಣಪತಿ ದೇವಸ್ಥಾನದ ಸನ್ನಿಧಿಯಲ್ಲಿ ‘ಸಂಸ್ಕಾರ ಸುಧಾ’ ಗ್ರೀಷ್ಮ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಡಾ. ಅರ್ಚನಾ ಹೆಗಡೆ ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಸ್ತೋತ್ರ, ಭಜನೆ ಮತ್ತು ಭರತನಾಟ್ಯದ ಮೂಲಕ ಭಾರತೀಯ ಸಂಸ್ಕಾರವನ್ನು ಉಳಿಸಿ ಬೆಳೆಸುವ ಭರವಸೆಯನ್ನು ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಡಾ. ಕೋಮಲಾ ಭಟ್, ಶಾಂತಾ ಭಗಿನಿ, ಮಧುಕೇಶ್ವರ ದೊಡ್ಮನೆ, ಆಕಾಶವಾಣಿಯ ಖ್ಯಾತ ಕಲಾವಿದ ದಿವಾಕರ ಹೆಗಡೆ, ಸಸ್ಯಶಾಸ್ತ್ರ ತಜ್ಞ ಉಮಾಪತಿ ಭಟ್, ವಿದುಷಿ ಅನುರಾಧಾ ಹೆಗಡೆ ಹಾಗೂ ವಿನಯ ಹೆಗಡೆ ಅವರು ಉಪನ್ಯಾಸಗಳನ್ನು ನೀಡಿದರು.


ಶಿಬಿರದ ಯಶಸ್ಸಿಗೆ ಸಹಕರಿಸಿದ ಸೈಬರ್ ಪ್ರತಾಪ್, ಪ್ರಚಾರಕರು, ಪಾಲಕರು ಹಾಗೂ ಎಲ್ಲಾ ಸಹಾಯಕರಿಗೆ ಶೃಂಗೇರಿ ಬಾಲಭಾರತೀ ಪರವಾಗಿ ಡಾ. ಅರ್ಚನಾ ಹೆಗಡೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.

About The Author

error: Content is protected !!