ಭಟ್ಕಳ : 2026-27ರ ಅಖಿಲ ಭಾರತ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಟೂರ್ನಮೆಂಟ್‌ಗಾಗಿ VTU ವಿಶ್ವವಿದ್ಯಾಲಯದ ಫುಟ್‌ಬಾಲ್ ತಂಡವನ್ನು ಪ್ರತಿನಿಧಿಸಲು ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ನ ಪ್ರಥಮ ವರ್ಷದ CSE(AI&ML) ಮೊಹಮ್ಮದ್ ಅಮಾನ ಕೋಲಾ ಅವರು ಆಯ್ಕೆಯಾಗಿದ್ದಾರೆ.

ಅವರ ಸಮರ್ಪಣೆ, ಶಿಸ್ತು ಮತ್ತು ಆಟದ ಮೇಲಿನ ಉತ್ಸಾಹ ಇಡೀ AITM ಕುಟುಂಬಕ್ಕೆ ಹೆಮ್ಮೆ ತಂದಿದೆ. AITM ಮ್ಯಾನೇಜ್‌ಮೆಂಟ್, AITM ಪ್ರಾಂಶುಪಾಲ ಡಾ. ಕೆ. ಫಜ್ಲೂರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಕರೂರಿ, ಪ್ರಥಮ ವರ್ಷದ ಮುಖ್ಯಸ್ಥ ಡಾ. ವಸೀಮ್ ಅಹ್ಮದ್ ಹಲ್ವೆಗರ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಭಾಸ್ಕರ್ ಬೆಳೆಗದ್ದೆ, ಮತ್ತು ಎಲ್ಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಅವರಿಗೆ ಶುಭ ಹಾರೈಸಿದ್ದಾರೆ.

More Stories
ಭಟ್ಕಳದಲ್ಲಿ ಮನೆ ಕಳ್ಳತನ: 5.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೆ
ಮುರ್ಡೇಶ್ವರದಲ್ಲಿ ಭೀಕರ ರಸ್ತೆ ಅಪಘಾತ: ಮಾಜಿ ಸೈನಿಕ ಸಾವು, ಮೂವರಿಗೆ ಗಾಯ
ಭಟ್ಕಳ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡಕ್ಕೆ ಮೇ 14ರಂದು ಶಿಲಾನ್ಯಾಸ