ಭಟ್ಕಳ: ಇಲ್ಲಿನ ಶ್ರೀ ನಾಗ ಮಾಸ್ತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವದ ನಾಲ್ಕನೇ ದಿನದ ಅಂಗವಾಗಿ ಆಯೋಜಿಸಲಾಗಿದ್ದ ‘ಮಹಿಳಾ ದಸರಾ’ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡವು.
ಮಧ್ಯಾಹ್ನ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಗಳು ಗಮನ ಸೆಳೆದವು. ರಾತ್ರಿ ನಡೆದ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯ ಉಪಸಂರಕ್ಷಣಾಧಿಕಾರಿ ಶ್ರೀಮತಿ ಹಸ್ತಾ ಶೆಟ್ಟಿ, “ಶಕ್ತಿಮಾತೆಯ ಆರಾಧನೆಯ ನವರಾತ್ರಿ ಸಂದರ್ಭದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ವೇದಿಕೆ ಕಲ್ಪಿಸಿ ಮಹಿಳಾ ದಸರಾ ಆಚರಿಸುತ್ತಿರುವುದು ಇಡೀ ಜಿಲ್ಲೆಗೆ ಮಾದರಿಯಾಗಿದೆ. ದೈನಂದಿನ ಒತ್ತಡಗಳಿಂದ ಹೊರಬಂದು ತಮ್ಮಲ್ಲಿರುವ ಸಾಂಸ್ಕೃತಿಕ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ” ಎಂದರು.
ಮುಖ್ಯ ಅತಿಥಿಯಾಗಿದ್ದ ಬಿಎಸ್‌ಎನ್‌ಡಿಪಿ ರಾಜ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಶ್ರೀಮತಿ ದೀಪಾ ನಾಯ್ಕ ಮಾತನಾಡಿ, “ಸಂಘಟನೆಯು ಜೀವನದ ಭದ್ರತೆಗೆ ಬುನಾದಿಯಾಗಿದ್ದು, ಪರಸ್ಪರ ಸಹಕಾರವು ಸಂಕಷ್ಟದಲ್ಲಿ ಧೈರ್ಯ ತುಂಬುತ್ತದೆ. ಕ್ಷೇತ್ರದಲ್ಲಿ ಮಹಿಳೆಯರಿಗೆ ಗೌರವ ನೀಡಿ ಮಹಿಳಾ ದಸರಾ ಆಚರಿಸುತ್ತಿರುವುದು ಶ್ಲಾಘನೀಯ” ಎಂದು ಬಣ್ಣಿಸಿದರು.
ಡಾ. ಸವಿತಾ ಕಾಮತ್ ಹಾಗೂ ಸಿದ್ಧಾರ್ಥ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ನಾಯ್ಕ ಕಾರ್ಯಕ್ರಮದ ಕುರಿತು ಮಾತನಾಡಿದರು. ಶ್ರೀಮತಿ ಲತಾ ನಾಗರಾಜ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಆರಂಭದಲ್ಲಿ ಶ್ರೀಮತಿ ರೇಖಾ ನಾಯ್ಕ ಸ್ವಾಗತಿಸಿದರು. ಶ್ರೀ ನಾಗ ಮಾಸ್ತಿ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ತಮ್ಮ ಪ್ರತಿಭೆ ವ್ಯಕ್ತಪಡಿಸಲು ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶ್ರೀಮತಿ ಭಾಗ್ಯ ನಾಯ್ಕ ವಂದಿಸಿದರು. ಶಿಕ್ಷಕಿ ಶ್ರೀಮತಿ ಪ್ರತಿಭಾ ಕರ್ಕಿಕರ್ ಕಾರ್ಯಕ್ರಮ ನಿರೂಪಿಸಿದರು.
About The Author


More Stories
ಮೈಸೂರು ದಸರಾ ಕ್ರೀಡಾಕೂಟ: ಕರಾಟೆಯಲ್ಲಿ ಕಂಚಿನ ಪದಕ ಗೆದ್ದ ಭಟ್ಕಳದ ಪ್ರವೀಣ್ ಹರಿಜನ್
ನಾಗ ಮಾಸ್ತಿ ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆಗೆ ಚಾಲನೆ; ಸನಾತನ ಸಂಸ್ಕೃತಿ ರಕ್ಷಣೆಗೆ ಒತ್ತು
ಭಟ್ಕಳದಲ್ಲಿ ಮದ್ಯದ ಅಮಲಿನಲ್ಲಿ ರಂಪಾಟ: ಬಿಯರ್ ಬಾಟಲಿಯಿಂದ ಹಲ್ಲೆ, ಮೂವರಿಗೆ ಗಾಯ