ಭಟ್ಕಳ: ಕಳೆದ ಒಂದು ವರ್ಷದಿಂದ ಖಾಲಿಯಾಗಿದ್ದ ಭಟ್ಕಳ ಉಪವಿಭಾಗಾಧಿಕಾರಿ ಹುದ್ದೆಗೆ ಸರ್ಕಾರ ನೇಮಕ ಮಾಡಿದ್ದು, ಜೆ. ಮಹೇಶ್ (ಕೆಎಎಸ್ ಕಿರಿಯ ಶ್ರೇಣಿ) ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.


ಕಳೆದ ವರ್ಷ ಡಾ. ನಯನ್ ಎನ್ ವರ್ಗಾವಣೆಯಾದ ಬಳಿಕ ಎಸಿ ಹುದ್ದೆ ಖಾಲಿಯಾಗಿತ್ತು. ಬಳಿಕ ಶಿರಸಿ ಉಪವಿಭಾಗಾಧಿಕಾರಿಯಾಗಿದ್ದ ಕುಮಾರಿ ಕಾವ್ಯರಾಣಿ ಅವರಿಗೆ ಭಟ್ಕಳದ ಪ್ರಭಾರಿ ಜವಾಬ್ದಾರಿ ನೀಡಲಾಗಿತ್ತು. ಅವರ ಇತ್ತೀಚಿನ ವರ್ಗಾವಣೆಯಿಂದ ಹುದ್ದೆ ಮತ್ತೆ ತೆರವಾಗಿತ್ತು.
ಈ ನಡುವೆ ಹೊನ್ನಾವರ ತಹಶೀಲ್ದಾರ ಪ್ರವೀಣ್ ಕರಂಡೆ ಅವರಿಗೆ ಪ್ರಭಾರಿ ಎಸಿ ಚಾರ್ಜ್ ನೀಡಲಾಗಿತ್ತು. ರಾಜ್ಯ ಸರ್ಕಾರದ ವರ್ಗಾವಣೆ ಆದೇಶದಂತೆ ಭಟ್ಕಳಕ್ಕೆ ಆಗಮಿಸಿದ ಜೆ. ಮಹೇಶ್ ಅವರು ಕಚೇರಿಯಲ್ಲಿ ಕಡತಗಳಿಗೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು.
ಅವರು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ, ಆಯುಕ್ತರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

More Stories
ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಭಟ್ಕಳದ ಯುವತಿ ದುರ್ಮರಣ
ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ಅಡಿಪಾಯ; ಶಾಸಕ ಮಂಕಾಳ ವೈದ್ಯ