ಭಟ್ಕಳ: ಪಟ್ಟಣದ ಕಿದ್ವಾಯಿ ರಸ್ತೆಯಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಸುಮಾರು ರೂ 5.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಶ್ರೀಮತಿ ನಾಹಿದ್ ಅಕ್ತರ್ (49) ಅವರು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ಕಿದ್ವಾಯಿ ರಸ್ತೆಯ 1ನೇ ಕ್ರಾಸ್‌ನಲ್ಲಿ ವಾಸವಾಗಿದ್ದಾರೆ. ದೂರಿನ ಪ್ರಕಾರ, ಮೇ 8ರ ಮುಂಜಾನೆ ಸುಮಾರು 12.50ರ ವೇಳೆಗೆ ಕಳ್ಳರು ಮನೆಯ ಹಿಂಭಾಗದ ಕಿಟಕಿಯ ಗಾಜು ಒಡೆದು ಒಳನುಗ್ಗಿದ್ದಾರೆ. ಬಳಿಕ ಮನೆಯ ಬಾಗಿಲು ತೆರಳಿ ಒಳ ಪ್ರವೇಶಿಸಿ, ಅಲಮಾರಿಯಲ್ಲಿ ಇರಿಸಿದ್ದ ಸುಮಾರು 55 ಗ್ರಾಂ ತೂಕದ ರೂ 5.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ 10 ಸಾವಿರ ನಗದು ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬAಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

More Stories
ಹನುಮಾನ್ ನಗರ ಶಾಲಾ ಆವರಣದಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಒತ್ತಾಯ
ಮುಂಗಾರು ಮುನ್ನ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಎಸಿ ಸೂಚನೆ
ಹಿಂದೂ ಕೊಂಕಣಿ ಪ್ರಿಮಿಯರ್ ಲೀಗ್: ರಂಜನ್ ಚಾಲೆಂಜರ್ಸ್ ಭಟ್ಕಳ ಚಾಂಪಿಯನ್