ವರಾಹ ಜಯಂತಿಯ ಅಂಗವಾಗಿ ಭೂವರಹನಾಥ ಕ್ಷೇತ್ರಕ್ಕೆ ಹರಿದು ಬಂದ ಭಕ್ತ ಸಾಗರ ..ಗೋವಿಂದ, ಗೋಪಾಲ, ನಮೋ ಭೂವರಹನಾಥ ಎಂದು ಮೊಳಗಿದ ಜಯ ಘೋಷಗಳು ..25 ಸಾವಿರಕ್ಕೂ ಹೆಚ್ಚಿನ ಭಕ್ತರಿಗೆ ಸಜ್ಜಪ್ಪ ಪ್ರಸಾದ ವಿತರಣೆ …
ಕೃಷ್ಣರಾಜಪೇಟೆ : ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂ ವೈಕುಂಠವೆAದೇ ಪ್ರಖ್ಯಾತವಾಗಿರುವ ವರಹನಾಥ ಕಲ್ಲಹಳ್ಳಿಯಲ್ಲಿ ಹೇಮಾವತಿ ನದಿಯ ದಡದಲ್ಲಿ ಭೂದೇವಿ ಸಮೇತನಾಗಿ ನೆಲೆಸಿರುವ ಶ್ರೀ ಲಕ್ಷ್ಮೀವರಹನಾಥ ಸ್ವಾಮಿ ಸುಕ್ಷೇತ್ರಕ್ಕೆ ವರಾಹ ಜಯಂತಿಯ ಅಂಗವಾಗಿ ಭಕ್ತ ಸಾಗರವೇ ಹರಿದು ಬಂದಿತ್ತು. ದೇವಾಲಯ ವ್ಯವಸ್ಥಾಪನ ಸಮಿತಿಯ ಸಂಚಾಲಕರಾದ ಡಾ. ಶ್ರೀನಿವಾಸರಾಘವನ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ಹೋಮ ಹವನಗಳು ಶ್ರದ್ಧಾ ಭಕ್ತಿಯಿಂದ ನಡೆದವು.

ಒಂದು ಸಾವಿರ ಲೀಟರ್ ಹಾಲು, 500 ಲೀಟರ್ ಎಳನೀರು, 500 ಲೀಟರ್ ಕಬ್ಬಿನ ಹಾಲು, ಹಸುವಿನ ತುಪ್ಪ, ಜೇನುತುಪ್ಪ, ಅರಿಶಿನ, ಶ್ರೀಗಂಧ, ಸುಗಂಧದ ದ್ರವ್ಯಗಳು ಹಾಗೂ ಪವಿತ್ರ ಗಂಗಾಜಲದಿAದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸಂಪಿಗೆ ಸೇವಂತಿಗೆ, ಗುಲಾಬಿ, ಮಲ್ಲೆ, ಕಮಲ, ತುಳಸಿ, ಪವಿತ್ರ ಪತ್ರೆಗಳು, ಧವನ ಸೇರಿದಂತೆ 58 ಬಗೆಯ ವಿವಿಧ ಹೂವುಗಳಿಂದ ಪುಷ್ಪಾಭಿಷೇಕ ಮಾಡಿ, ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿ, ಲೋಕ ಕಲ್ಯಾಣಾರ್ಥವಾಗಿ ಭೂವರಾಹ ಹೋಮ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ವರಾಹ ಜಯಂತಿಯ ಅಂಗವಾಗಿ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರಿಗೆ ಬಿಸಿಬೇಳೆ ಭಾತ್, ಮೊಸರನ್ನ, ಸಿಹಿ ಪೊಂಗಲ್ ಹಾಗೂ ಸಜ್ಜಪ್ಪ ಪ್ರಸಾದವನ್ನು ವಿತರಿಸಲಾಯಿತು. ಭೂ ವರಹನಾಥ ದೇವಾಲಯ ವ್ಯವಸ್ಥಾಪನ ಸಮಿತಿ ಸಂಚಾಲಕರಾದ ಡಾ. ಶ್ರೀನಿವಾಸರಾಘವನ್ ನೆರೆದಿದ್ದ ಭಕ್ತ ವೃಂದವನ್ನು ಉದ್ದೇಶಿಸಿ ಮಾತನಾಡಿ ಬೇಡಿ ಬಂದ ಭಕ್ತರ ಬೇಡಿಕೆಗಳನ್ನು ಈಡೇರಿಸಿ ಆಶೀರ್ವದಿಸುತ್ತಿರುವ ಸ್ವಾಮಿಯ ಅನುಗ್ರಹದಿಂದಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭೂ ವ್ಯಾಜ್ಯಗಳ ಪರಿಹಾರಕನಾದ ಸ್ವಾಮಿಯ ಕರುಣೆಯಿಂದಾಗಿ ಸ್ವಂತ ಸೂರು ಹೊಂದಬೇಕೆAದು ಸಂಕಲ್ಪ ಮಾಡಿಕೊಂಡವರಿಗೆ ಸ್ವಂತ ಮನೆಯ ಭಾಗ್ಯವು ದೊರೆಯುತ್ತಿದೆ ಎಂದು ತಿಳಿಸಿದ ರಾಘವನ್ ಬುದ್ಧಿಯವರು ದುಷ್ಟನಾದ ಹಿರಂನ್ಯಾಕ್ಷ ನನ್ನು ಸಂಹರಿಸಿ ಭೂದೇವಿಯನ್ನು ಸಂರಕ್ಷಣೆ ಮಾಡಿದ ಮುಹೂರ್ತದ ದಿನವನ್ನು ವರಾಹ ಜಯಂತಿಯನ್ನಾಗಿ ಆಚರಿಸಲಾಗುತ್ತಿದೆ. ಸಂಕಷ್ಟದಲ್ಲಿರುವ ಜನರು ಯಾವುದೇ ಸಮಯದಲ್ಲಿ ಪರಿಶುದ್ಧವಾದ ಮನಸ್ಸಿನಿಂದ ನಮೋ ಭಗವತೇ ವರಾಹ ರೂಪಾಯ ಎಂಬ ಮಂತ್ರವನ್ನು ಪರಿಶುದ್ಧವಾದ ಮನಸ್ಸಿನಿಂದ ಜಪಿಸಿದರೆ ಸಾಕು ಕಷ್ಟಗಳು ದೂರಾಗಿ ಶಾಂತಿ ನೆಮ್ಮದಿಯು ನೆಲೆಸುತ್ತದೆ ಎಂದು ಹೇಳಿದರು.
ಭೂ ವರಹನಾಥ ಕ್ಷೇತ್ರವನ್ನು ತಿರುಮಲ ತಿರುಪತಿಯ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ದೇವಾಲಯವನ್ನು ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದ ಹೊಯ್ಸಳ ಶಿಲ್ಪಕಲಾ ವಾಸ್ತು ವೈಭವದಲ್ಲಿ ನಿರ್ಮಿಸಲಾಗುತ್ತಿದೆ ದೇವಾಲಯದ ಸುತ್ತಲೂ ನಾಲ್ಕು ದಿಕ್ಕುಗಳಲ್ಲಿಯೂ 38 ಅಡಿ ಎತ್ತರದ ನಾಲ್ಕು ಗೋಪುರಗಳು ಮೂರನೇ ಪ್ರಾಕಾರದಲ್ಲಿ 108 ಕಾಲುಗಳ ಮುಖ ಮಂಟಪ ಹಾಗೂ 186 ಅಡಿ ಎತ್ತರದ ಬೃಹತ್ ರಾಜಗೋಪುರವು ನಿರ್ಮಾಣವಾಗುತ್ತಿದೆ. ಪರಕಾಲ ಸ್ವಾಮೀಜಿಗಳು ದೇವಾಲಯವನ್ನು ಇನ್ನು ಮೂರು ವರ್ಷಗಳಲ್ಲಿ ಸಂಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದು ಭಕ್ತರ ಸಹಕಾರದಿಂದ ದೇವಾಲಯ ನಿರ್ಮಾಣ ಕೆಲಸ ಕಾರ್ಯಗಳು ಭರದಿಂದ ಸಾಗಿವೆ ಎಂದು ಶ್ರೀನಿವಾಸರಾಘವನ್ ವಿವರಿಸಿದರು.
ವರಾಹ ಜಯಂತಿಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು ದಂಪತಿಗಳು, ರಾಜ್ಯದ ಮಾಜಿ ಸಚಿವರಾದ ಡಾ.ನಾರಾಯಣಗೌಡ ದಂಪತಿಗಳು, ಸಿ.ಎಸ್. ಪುಟ್ಟರಾಜು ದಂಪತಿಗಳು, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಷ್, ಮೂಡ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್ ದಂಪತಿಗಳು ಸೇರಿದಂತೆ 25,000ಕ್ಕೂ ಹೆಚ್ಚಿನ ಭಕ್ತಾದಿಗಳು ವರಹ ಜಯಂತಿಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭೂವರಹನಾಥ ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ವಿದ್ಯಾರ್ಥಿಗಳು ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡಿ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ.ಅಮ್ಮ ರಾಮಚಂದ್ರ ಕರೆ.
ಶಿಕ್ಷಕರು ವಿದ್ಯಾರ್ಥಿಗಳನ್ನು ಕೇವಲ ಅಂಕವೀರರನ್ನಾಗಿ ರೂಪಿಸದೆ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಉತ್ತಮವಾದ ಸಂಸ್ಕಾರ ನೀಡಿ ಭವಿಷ್ಯದ ನಾಗರೀಕರನ್ನಾಗಿ ಸಜ್ಜುಗೊಳಿಸಬೇಕು. ಡಾ.ಪಿ. ಹರೀಶ್ ಕರೆ.
ಕೆ. ಆರ್.ಪೇಟೆ ಪಟ್ಟಣದಲ್ಲಿ ಮಿಂಚಿನ ಸಂಚಾರ, ವಿವಿಧ ಹೋಟೆಲ್ ಗಳು ಹಾಗೂ ಬೇಕರಿಗಳ ಮೇಲೆ ದಾಳಿ, ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿ