May 24, 2026

ಗುಣಾತ್ಮಕ ಚಿಂತನೆಯೊ0ದಿಗೆ ಶ್ರಮಿಸಿದರೆ, ಏನನ್ನಾದರೂ ಸಾಧಿಸಬಹುದು – ವಿನೋದ ಹೆಗ್ಡೆ

ಭಟ್ಕಳ: ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2025-26ನೇ ಸಾಲಿನ ವಾರ್ಷಿಕೋತ್ಸವವು ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೊನ್ನಾವರದ ಸರ್ಕಾರಿ ಮೋಹನ ಕೆ ಶೆಟ್ಟಿ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತçದ ಉಪನ್ಯಾಸಕರಾದ ವಿನೋದ ಹೆಗ್ಡೆ ಮಾತನಾಡಿ ” ವಿದ್ಯಾರ್ಥಿಗಳು ಋಣಾತ್ಮಕವಾಗಿ ಚಿಂತಿಸಬಾರದು, ಗುಣಾತ್ಮಕ ಚಿಂತನೆಯೊAದಿಗೆ ಶೃದ್ಧೆಯಿಂದ ಶ್ರಮಿಸಿದರೆ, ಏನನ್ನಾದರೂ ಸಾಧಿಸಬಹುದು ” ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಗುರು ಸುಧೀಂದ್ರ ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ಬ್ಯಾಂಕ್ ಅಫ್ ಬರೋಡಾ, ಶಿರಾಲಿಯ ಉದ್ಯೋಗಿಯಾಗಿರುವ ರಜತ ಆಚಾರ್ಯ ಮಾತನಾಡಿ ತಮ್ಮ ಕಾಲೇಜು ದಿನಗಳನ್ನು ಮೆಲಕು ಹಾಕುತ್ತ, ವಿದ್ಯಾರ್ಥಿಗಳು ಕೌಶಲ್ಯ, ಸಂವಹನ ಸಾಮರ್ಥ್ಯವನ್ನು ವೃದ್ಧಿಸಿಕೊಂಡು, ಸತತ ಪ್ರಯತ್ನದ ಮೂಲಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕು” ಎಂದು ಹೇಳಿದರು.

ಭಟ್ಕಳ ಎಜುಕೇಶನ್ ಟ್ರಸ್ಟ’ನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ರವರು “ಮುಂದಿನ ಶೈಕ್ಷಣಿಕ ವರ್ಷ ಕಾಲೇಜಿನಲ್ಲಿ ಅಕ್ಷ-2026 ರ ಅಡಿಯಲ್ಲಿ ಎ.ಐ ಸರ್ಟಿಫಿಕೇಟ್, ಕೌಶಲ್ಯ ತರಬೇತಿ, ಸಾಮಾಜಿಕ ಜಾಗೃತಿ ಗೆ ವಿಶೇಷ ಪ್ರಾಶಸ್ತö್ಯ ನೀಡಲಾಗುವುದು ಎಂದು ಹೇಳಿದರು”. ಟ್ರಸ್ಟಿ ರಮೇಶ ಖಾರ್ವಿ ಯವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ’ನ ಅಧ್ಯಕ್ಷ ಡಾ. ಸುರೇಶ ನಾಯಕ “ನಮ್ಮಲ್ಲಿನ ಕ್ಯಾಂಪಸ್ ನೇಮಕಾತಿ ತರಬೇತಿಯಲ್ಲಿ ಶಿಸ್ತಿನಿಂದ ಪಾಲ್ಗೊಳ್ಳುವುದರೊಂದಿಗೆ ಎಲ್ಲರೂ ಉದ್ಯೋಗವಂತರಾಗಬೇಕು” ಎಂದು ಹೇಳಿದರು.

ವೇದಿಕೆಯ ಮೇಲೆ ಉಪಸ್ಥಿತರಿರುವ ಗಣ್ಯರು ಸದ್ಯ ಜರುಗಲಿರುವ ಕ್ಯಾಂಪಸ್ ನೇಮಕಾತಿಯ ವಿವರವನ್ನೊಳಗೊಂಡ ಪೋಸ್ಟರ್’ನ್ನು ಅನಾವರಣಗೊಳಿಸಿದರು. 2025-26ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪಠ್ಯ ಪಠ್ಯೇತರ, ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರಾಂಶುಪಾಲರಾದ ಶ್ರೀನಾಥ ಪೈ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳನ್ನು ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಹಾಗೂ ಬಿ.ಬಿ.ಎ-ಬಿ.ಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಪರಿಚಯಿಸಿದರೆ, ಉಪನ್ಯಾಸಕಿ ದೀಪಾ ನಾಯ್ಕ ವಂದಿಸಿದರು. ವಿದ್ಯಾರ್ಥಿನಿಯರಾದ ಸಹನಾ ಹಾಗೂ ವಿಧಾತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

About The Author

error: Content is protected !!