September 8, 2026

ಗಾಳಿಮಳೆಗೆ ಶಿರಾಲಿಯಲ್ಲಿ ಅವಾಂತರ: ಸ್ಕೂಟಿಯ ಮೇಲೆ ವಿದ್ಯುತ್ ಕಂಬ ಬಿದ್ದು ವ್ಯಕ್ತಿಗೆ ಗಾಯ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮದಲ್ಲಿ ಭಾರೀ ಗಾಳಿ ಸಹಿತ ಮಳೆಯ ಪರಿಣಾಮ ವಿವಿಧ ಕಡೆ ಅವಾಂತರಗಳು ಸಂಭವಿಸಿವೆ. ವಿದ್ಯುತ್ ಕಂಬ ಸ್ಕೂಟಿಯ ಮೇಲೆ ಬಿದ್ದು ಓರ್ವ ವ್ಯಕ್ತಿ ಗಾಯಗೊಂಡ ಘಟನೆ ಸೇರಿದಂತೆ ಮನೆಗಳ ಮೇಲೂ ಮರಗಳು ಬಿದ್ದು ಹಾನಿಯಾಗಿದೆ.

ಶಿರಾಲಿ-2 ಗ್ರಾಮದ ಕೋಟೆಬಾಗಿಲು ಆಸ್ಪತ್ರೆ ರಸ್ತೆಯಲ್ಲಿರುವ ಸೀಮಾ ವೈನ್ಸ್ ಸೆಂಟರ್ ಎದುರು ಭಾರೀ ಗಾಳಿಗೆ ವಿದ್ಯುತ್ ಕಂಬವೊAದು ಸ್ಕೂಟಿಯ ಮೇಲೆ ಬಿದ್ದ ಪರಿಣಾಮ ಮೂಡ ಶಿರಾಲಿ ನಿವಾಸಿ ವೆಂಕಟರಮಣ ಮಾಸ್ತಿ ನಾಯ್ಕ (35) ಗಾಯಗೊಂಡಿದ್ದಾರೆ. ಘಟನೆ ವೇಳೆ ಅವರು ಪ್ರಜ್ಞೆ ತಪ್ಪಿದ್ದು, ಸ್ಥಳೀಯರು ತಕ್ಷಣ ಅವರನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಮನೆಗೆ ಮರಳಿರುವುದಾಗಿ ತಿಳಿದುಬಂದಿದೆ.

ಮತ್ತೊAದು ಘಟನೆಯಲ್ಲಿ, ಮಲ್ಲಿಕಾನ ಕಾಯ್ಕಿಣಿ ಪ್ರದೇಶದ ವೆಂಕಟರಮಣ ಬೆರ್ಮ ನಾಯ್ಕ ಅವರ ನಿವಾಸಕ್ಕೆ ಹೊಂದಿಕೊAಡಿರುವ ದನದ ಕೊಟ್ಟಿಗೆಯ ಮೇಲೆ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಕೊಟ್ಟಿಗೆಗೆ ಹಾನಿಯಾಗಿದೆ. ಆದರೆ ಘಟನೆಯ ವೇಳೆ ಜನರು ಹಾಗೂ ಜಾನುವಾರುಗಳು ಅಪಾಯದಿಂದ ಪಾರಾಗಿವೆ.

ಇದೇ ವೇಳೆ ಶಿರಾಲಿ-1ರ ಗುಡಿಹಿತ್ತಲ ನಿವಾಸಿ ಅಬ್ದುಲ್ ಅಜೀಜ್ ಅವರ ಮನೆಯ ಮೇಲೂ ಕಾಡು ಜಾತಿಯ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಮುಂಡಳ್ಳಿ ಗ್ರಾಮದ ಹಳ್ಳೆರಕೇರಿ ನಿವಾಸಿಯಾದ ಶ್ರೀ ಸುಕ್ರಯ್ಯ ದೇವಪ್ಪ ಹಳ್ಳೇರ ಇವರ ವಾಸ್ತವ್ಯದ ಮನೆಯ ಮೇಲ್ಛಾವೇಣಿ ಮೇಲೆ ತೆಂಗಿನ ಮರ ಬಿದ್ದು ಮನೆಯ ಮೇಲ್ಛಾವೇಣಿಗೆ ಭಾಗಶಃ ಹಾನಿಯಾಗಿದ್ದು ಇರುತ್ತದೆ.

ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಪರಿಹಾರ ಕ್ರಮ ಕೈಗೊಂಡಿದ್ದಾರೆ.

About The Author

error: Content is protected !!