May 23, 2026

ಕ್ಷಯರೋಗದ ಬಗ್ಗೆ ಜಾಗೃತಿ ಅಗತ್ಯ – ಡಾ.ಇಲಿಯಾಸ್ ಹವಾಲ್ದಾರ್.

ಶಿರಸಿ : ಕ್ಷಯ ರೋಗದ ಬಗ್ಗೆ ಜಾಗೃತಿ ಅಗತ್ಯವಾಗಿದ್ದು ರೋಗ ಲಕ್ಷಣಗಳ ಬಗ್ಗೆ ಮೊದಲು ನಾವು ತಿಳಿದುಕೊಂಡು ಕ್ಷಯರೋಗ ಪತ್ತೆಗೆ ಇರುವಂತಹ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿ, ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆದುಕೊಂಡಾಗ ಅದನ್ನು ನಿರ್ನಾಮ ಮಾಡಬಹುದು ಎಂದು ರೇವಣಕಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಇಲಿಯಾಸ್ ಹವಾಲ್ದಾರ್. ರವರು ಅಭಿಪ್ರಾಯಪಟ್ಟರು. ಅವರು ಶಿರಸಿಯ ರೇವಣಕಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕ್ಷಯ ಮುಕ್ತ ಭಾರತಕ್ಕಾಗಿ ನೂರು ದಿನಗಳ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯ ಕ್ಷಯರೋಗ ಮೇಲ್ವಿಚಾರಕ ಉದಯಶಂಕರ ರವರು ಮಾತನಾಡಿ ಕ್ಷಯ ರೋಗ ನಿರ್ಮೂಲನೆಗಾಗಿ ದೇಶಾದ್ಯಂತ ನೂರು ದಿನಗಳ ಅಭಿಯಾನ ಕಾರ್ಯಕ್ರಮ ಪ್ರಾರಂಭಗೊAಡಿದ್ದು ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು ಏ ಐ ತಂತ್ರಜ್ಞಾನ ಒಳಗೊಂಡ ಮೊಬೈಲ್ ಹ್ಯಾಂಡೇಡ್ ಎಕ್ಸರೆಯನ್ನು ಒಳಗೊಂಡ ಆಧುನಿಕ ವಿಧಾನಗಳನ್ನು ಅನುಸರಿಸಬೇಕು ಎಂದರು. ಮೊಬೈಲ್ ಹ್ಯಾಂಡೇಡ್ ಎಕ್ಸರೆಯು ಕ್ಷಯದ ಜೊತೆಗೆ 12 ಬೇರೆ ಬೇರೆ ಕಾಯಿಲೆಗಳನ್ನು ಪತ್ತೆ ಹಚ್ಚಲಿದ್ದು, 2030 ಹೊತ್ತಿಗೆ ಕ್ಷಯಮುಕ್ತ ಭಾರತ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗೌರಿ ಸಿ ನಾಯ್ಕ್ ರವರು ಮಾತನಾಡಿ ಕ್ಷಯ ರೋಗ ಕೆಮ್ಮು ಕಫದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆ ಆಗಿರುವುದರಿಂದ ತಕ್ಷಣ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರು. ಕಾರ್ಯಕ್ರಮದ ನಂತರ ವೈದ್ಯಾಧಿಕಾರಿಗಳಾದ ಡಾ. ಡಾ.ಇಲಿಯಾಸ್ ಹವಾಲ್ದಾರ್ ರವರು ಆರೋಗ್ಯ ತಪಾಸಣೆ ನಡೆಸಿದರೆ, ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ ಲಕ್ಷ್ಮಣ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಆಂಜನೇಯ ರವರು ಕ್ಷಕಿರಣ ತಪಾಸಣೆ ನಡೆಸಿದರು. ಸಮುದಾಯ ಆರೋಗ್ಯ ಅಧಿಕಾರಿಗಳಾದ ಅಂಬುತಾಯಿ ಸುತಾರ್ & ರವೀನಾ ಚೌಗಲಾ ರವರು ರಕ್ತದೊತ್ತಡ ಹಾಗೂ ಇತರೆ ಪರೀಕ್ಷೆ ನಡೆಸಿದರೆ, ಪ್ರಯೋಗಶಾಲಾ ತಂತ್ರಜ್ಞರಾದ ಶ್ವೇತ ಶೆಟ್ಟಿ ರವರು ರಕ್ತಪರೀಕ್ಷೆ ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಅಮೃತ ನಾಯ್ಕ್ ರವರು ಸ್ವಾಗತಿಸಿದರೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿ ಸಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಮೇಲ್ವಿಚಾರಕಿ ರೂಪ ನಾಯ್ಕ್ ರವರು ಕಾರ್ಯಕ್ರಮ ನಿರ್ವಹಿಸಿದರೆ, ಪೂಜಾ ಪಾಟೀಲ್ ರವರು ವಂದಿಸಿದರು. ರೇವಣಕಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳು, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸುಮಾರು 50ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ಮಾಡಿ ಎಕ್ಸರೇ ತಪಾಸಣೆ ಮಾಡಲಾಯಿತು.

About The Author

error: Content is protected !!