ಹೊನ್ನವರ : ಶರಾವತಿ ನದಿ ತಟದಲ್ಲಿರುವ ನಂಬಿ ಬರುವ ಭಕ್ತರ ಸಕಲ ಇಷ್ಟಾರ್ಥ ಈಡೇರುಸುವ ಶಕ್ತಿ ಸ್ಥಳ ಎನ್ನುವ ನಂಬಿಕೆ ಇರುವ ಬಳ್ಕೂರ ಸಮೀಪದ ಬುಡಬುಡ ಹಕ್ಲ ಭುವನೇಶ್ವರಿ ದೇವಿ ಸನ್ನದಿಯಲ್ಲಿ ವಾರ್ಷಿಕ ವರ್ಧಂತಿ ಉತ್ಸವ ವಿಜೃಂಭಣೆಯಿAದ ನೇರವೇರಿತು. ಹೊನ್ನಾವರ ತಾಲೂಕಿನ ಬಳ್ಕೂರ ಗ್ರಾಮದಲ್ಲಿ ನೆಲೆಯೂರಿರುವ ಬುಡಬುಡ ಹಕ್ಲ ಭುವನೇಶ್ವರಿ ಅಮ್ಮ, ಶ್ರೀ ಸತಿ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ 15 ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಧಾರ್ಮಿಕ ವಿಧಿವಿಧಾನದ ಮೂಲಕ ವಿಜೃಂಭಣೆಯಿAದ ಗುರುವಾರ ಜರುಗಿತು.

ನಿಸರ್ಗ ರಮಣೀಯ ಕ್ಷೇತ್ರದಲ್ಲಿರುವ ಶ್ರೀ ಕ್ಷೇತ್ರದಲ್ಲಿ ಉತ್ಸವದ ಅಂಗವಾಗಿ ಕಲಾವೃದ್ದಿ ಹೋಮ, ಸಾಮೋಹಿಕ ಸತ್ಯನಾರಾಯಣ ಪೂಜೆ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿತು. ವರ್ಧಂತಿ ಉತ್ಸವದ ನಿಮಿತ್ತ ವಿಶೇಷ ಹೂವಿನ ಅಲಂಕಾರದ ಮೂಲಕ ಸಿಂಗರಿಸಲಾಗಿತ್ತು. ಮಹಾಪೂಜೆ ಪ್ರಸಾದ ವಿತರಣೆ, ಆಗಮಿಸಿದ ಭಕ್ತರಿಗೆ ಪ್ರಸಾದ ಭೋಜನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆ, ರಾಜ್ಯದ ವಿವಿಧಡೆಯಿಂದ ಆಗಮಿಸಿದ ಭಕ್ತರು ದೇವಿಯ ಸನ್ನದಿಯಲ್ಲಿ ವಿವಿಧ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಕೃತಾರ್ಥರಾದರು.

ಪ್ರಧಾನ ಅರ್ಚಕರಾದ ರಾಜಶೇಖರ ಮಾದೇವ ಕರಿಮನೆ ಮಾತನಾಡಿ 400 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರಕ್ಕೆ ರಾಜ್ಯದ ವಿವಿಧಡೆಯಿಂದ ಭಕ್ತರು ಆಗಮಿಸುತ್ತಾರೆ. ಹೊರ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅನಾರೊಗ್ಯಕ್ಕೆ ತುತ್ತಾದಾಗ, ಬಂಗಾರಮಕ್ಕಿ ವಿರಾಂಜನೇಯ ದೇವರು ಮತ್ತು ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನದಿಯಲ್ಲಿ ಕೇಳಿದಾಗ ಕ್ಷೇತ್ರವನ್ನು ಮುನ್ನಡೆಸುವ ಪ್ರಸಾದ ನೀಡಿದ ಬಳಿಕ ಕ್ಷೇತ್ರದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಸಂಕ್ರಾAತಿ ಸೇರಿದಂತೆ ವಿವಿಧ ಹಬ್ಬದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯತ್ತಿದೆ. ಭಕ್ತರು ತಮ್ಮ ಬಯಕೆ ಈಡೇರಿದಾಗ ಹರಕೆ ರೂಪದಲ್ಲಿ ಅನೇಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು.
ಭಕ್ತರಾದ ನಾಗರಾಜ ಶೇಟ್ ಹಡಿನಬಾಳ ಗದ್ದೆಮನೆ ಮಾತನಾಡಿ ತಂದೆಯವರು ಮರದಿಂದ ಕೆಳಕ್ಕೆ ಬಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕ್ಷೇತ್ರಕ್ಕೆ ಬಂದು ಹರಕೆ ಹೊತ್ತು ಹೋದ ಬಳಿಕ ನಮ್ಮ ಸಂಕಷ್ಠ ದೂರವಾಯಿತು. ಕುಟುಂಬದ ಹಲವು ಸಮಸ್ಯೆ ಪರಿಹಾರವಾಗಿದೆ ಎಂದರು. ಹುಬ್ಬಳ್ಳಿಯಿಂದ ಆಗಮಿಸಿದ ವಿಷ್ಣು ಮಾತನಾಡಿ ನಂಬಿಕೆ ಇದ್ದಲ್ಲಿ ದೇವಿ ಕೈ ಬಿಡುವುದಿಲ್ಲ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದೆ ಶೇಕಡಾ 90 ರಷ್ಟು ಕಷ್ಟ ಪರಿಹಾರವಾಗಿದೆ. ದೇವಿ ಸ್ಥಳಕ್ಕೆ ಆಗಮಿಸಿ ಬೇಡಿಕೊಂಡರೆ ತಮ್ಮ ಇಷ್ಠಾರ್ಥವು ಈಡೇರಲಿದೆ ಎಂದರು.
ಶಿವಮೊಗ್ಗಾ ದಿಂದ ಆಗಮಿಸಿದ ಸಂತೋಷ ಮಾತನಾಡಿ ಉದ್ಯೋಗದ ಸ್ಥಳ ಬದಲಾವಣೆಗಾಗಿ ಏಳು ವರ್ಷದ ಹಿಂದೆ ಹರಕೆ ಹೊತ್ತಾಗ ಅದು ಈಡೇರಿತು. ಅಂದಿನಿAದ ಇಂದಿನವರೆಗೂ ನನ್ನ ಹಲವು ಸಮಸ್ಯೆಗೆ ಪರಿಹಾರ ದೊರೆತಿದೆ ಎಂದರು. ಕೊಡ್ಲಮನೆ ವಿಷ್ಣು ನಾಯ್ಕ ಮಾತನಾಡಿ ನನ್ನ ಸಹೋದರ ನಾಪತ್ತೆಯಾದಾಗ ದೇವಿ ಸ್ಥಳದಲ್ಲಿ ಹರಕೆ ಹೊತ್ತು ಕೆಲವೇ ದಿನ ಸುಬ್ರಹ್ಮಣ್ಯದಲ್ಲಿ ಪತ್ತೆಯಾದರು. ಜಮೀನಿನ ಸಮಸ್ಯೆ ಬಗೆಹರಿಯಲಿ ಎಂದು ಬೇಡಿಕೊಂಡು ಹದಿನೈದು ದಿನದಲ್ಲಿ ಸಮಸ್ಯೆ ಬಗೆಹರಿದಿದೆ ಎಂದು ದೇವಿಮಹಿಮೆಯ ಕುರಿತು ತಿಳಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಹೊನ್ನಾವರ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸುಧೀಶ ನಾಯ್ಕ ಆಯ್ಕೆ
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ. ಜಿ. ನಾಯ್ಕರವರು ಅವಿರೋಧವಾಗಿ ಆಯ್ಕೆ
ಕಡಲ ಅಲೆಗಳ ಆರ್ಭಟಕ್ಕೆ ಸಿಲುಕಿ ದೋಣಿ ಮುಳುಗಡೆ: ಮಂಕಿಯಲ್ಲಿ ಮೀನುಗಾರ ಸಾವು