ಕುಮಟಾ : ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಅವಿಸ್ಮರಣೀಯವಾದ ಸೇವೆಯನ್ನು ಸಲ್ಲಿಸಿ ವಿಶ್ರಾಂತರಾದ ಉತ್ತಮ ಸಾರ್ವಜನಿಕ ಸಂಬAಧವನ್ನು ಹೊಂದಿದ ತಾಲ್ಲೂಕಿನ ಬರ್ಗಿಯ ನಿವಾಸಿಯಾಗಿರುವ ಟಾಕೇಶ್ವರ ಕೃಷ್ಣ ಪಟಗಾರರವರನ್ನು ” ಸುಜನಮುಖಿ “- ಅಭಿದಾನದೊಂದಿಗೆ ಹುಟ್ಟೂರಿನಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ಸಂಯೋಜನೆಯಲ್ಲಿ ಆಯೋಜಿತವಾದ ಬರ್ಗಿ ಸಂಸ್ಕೃತೋತ್ಸವ ಸಮಾರಂಭದಲ್ಲಿ ಆಪ್ತವಾಗಿ ಗೌರವಿಸಲಾಯಿತು.

ಸಮಾರಂಭದ ನೇತಾರರಾದ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿಯವರು ಟಿ.ಕೆ.ಪಟಗಾರರವರ ಸಜ್ಜನಿಕೆಯ ನಡೆ – ನುಡಿಗಳ ಗುಣಗಾನವನ್ನು ಮಾಡಿ, ಬರ್ಗಿ ಪ್ರೌಢ ಶಾಲೆಯಲ್ಲಿ ಮತ್ತು ಬರ್ಗಿ ಊರಿನಲ್ಲಿ ಸಂಸ್ಕೃತದ ವಾತಾವರಣಕ್ಕಾಗಿ ಅವರ ಹಾಗೂ ಅವರ ಕುಟುಂಬದ ಬೆಂಬಲವನ್ನು ಶ್ಲಾಘಿಸಿದರು. ತಾನು ನಿರೀಕ್ಷಿಸಿರದ ಸನ್ಮಾನವು ಹುಟ್ಟೂರಿನ ಸಂಸ್ಕೃತದ ಕಾರ್ಯಕ್ರಮದಲ್ಲಿ ತನಗೆ ಪ್ರಾಪ್ತಿಸಿರುವುದು ಊರು ದೇವರ ಹಾಗೂ ಹಿರಿಯರ ಪ್ರಸಾದವೆಂದೇ ಭಾವಿಸುತ್ತೇನೆಂದ ಟಾಕೇಶ್ವರರು, ಸಂಘಟಕರನ್ನು ಅಭಿನಂದಿಸಿದರು.

ಈ ಕಾರ್ಯಕ್ರಮವನ್ನು ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾ ಪೀಠವು ನಾಗನೆಲೆಯ ಕನ್ನಡ ಭಾರತೀ ಪ್ರಪಂಚ, ಡಾ. ಗಜಾನನ ನಾಯಕ ಅಭಿಮಾನಿ ಬಳಗ, ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಶ್ರೀ ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘ, ಕರ್ನಾಟಕ ಸಂಸ್ಕೃತ ಪರಿಷತ್, ಕರ್ನಾಟಕ ರಣಧೀರ ವೇದಿಕೆ, ತೊರ್ಕೆಯ ಆನಂದ ಕವರಿ ಪ್ರತಿಷ್ಠಾನ ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಪ್ರದೀಪ ನಾಯಕ ದೇವರಬಾವಿಯವರ ಸಹಯೋಗದಲ್ಲಿ ಸಂಘಟಿಸಿತ್ತು.
ಸಮಾರAಭವನ್ನು ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದ ಅಧ್ಯಕ್ಷರಾದ ಮಿರ್ಜಾನಿನ ಕನ್ನಡದ ಸಮೀರರು ಉದ್ಘಾಟಿಸಿದರು. ಪ್ರದೀಪ ನಾಯಕ ದೇವಾರಬಾವಿಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ವಿಶ್ವಖ್ಯಾತಿಯ ಕ್ರಿಕೆಟ್ ಕೋಚರ್ ರಾಘವೇಂದ್ರ ದಿವಗಿಯವರ ತೀರ್ಥರೂಪರಾದ ಮೋಹನ ಭಂಡಾರಿ ಮಾಸ್ತರರು, ಬರ್ಗಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ನಾಯ್ಕ, ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಕೋಶಾಧ್ಯಕ್ಷರಾದ ಶಿವಚಂದ್ರ, ಕನ್ನಡ ಭಾರತಿ ಪ್ರಪಂಚದ ಸಂಚಾಲಕರಾದ ನಾರಾಯಣ ನಾಗು ನಾಯಕ ಹಾಗೂ ವಿಶ್ವ ನಾ ಡವರ ಪ್ರತಿಷ್ಠಾನದ ವಿಶ್ವಾಧ್ಯಕ್ಷರಾದ ಕುಂದಾಪುರದ ಕೋಟೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಷಯದ ಜನಪ್ರಿಯ ಉಪನ್ಯಾಸಕರಾದ ಹರೀಶ ನಾಯಕ ಬೇಲೇಕೇರಿ ಮೊದಲಾದವರಿದ್ದರು.

More Stories
ಹೊನ್ನಾವರದ ಎಂ.ಜಿ. ನಾಯ್ಕರಿಗೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಟ್ಟ
ಮನೆ- ಮನವನ್ನು ಬೆಳಗಲು ಮನೆಗೊಂದು ಗ್ರಂಥಾಲಯ ಅವಶ್ಯ. -ಡಾ. ಮಾನಸ
ಬರ್ಗಿಯಲ್ಲಿ ಮನ್ನಣೆಯ ಮಣೆಯೇರಿದ ಗಾಯತ್ರಿ ಗೌಡ