filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.5208333, 0.26328126);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 45;
ಭಟ್ಕಳ: ಇತ್ತೀಚೆಗೆ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಬಿಎ ವಿಭಾಗವು ಆಯೋಜಿಸಿದ ಬಿಜ್ ಲೀಡ್ ಎಕ್ಸ್ 2025-26 ಕಾರ್ಯಕ್ರಮದ ಗ್ರ‍್ಯಾಂಡ್ ಫಿನಾಲೆಯು ಸಂಭ್ರಮದಿAದ ಜರುಗಿತು.

ಬಿಬಿಎ ವಿದ್ಯಾರ್ಥಿಗಳ ಕೌಶಲ್ಯ, ನಾಯಕತ್ವ ಮತ್ತು ವ್ಯವಹಾರ ತಂತ್ರಜ್ಞಾನವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ ಆರಂಭದಿAದಲೂ ತೀವ್ರ ಸ್ಪರ್ಧೆ ಕಂಡುಬAದಿತು. ಒಟ್ಟೂ 44 ವಿದ್ಯಾರ್ಥಿಗಳಿದ್ದ ಈ ವಿಶೇಷ ಸ್ಪರ್ಧೆಯಲ್ಲಿ, 6 ವಿವಿಧ ಸುತ್ತುಗಳ ಮೂಲಕ ನಡೆದು, ಉತ್ತಮ ಸಾಧನೆ ಮಾಡಿದ 8 ವಿದ್ಯಾರ್ಥಿಗಳು ಗ್ರ‍್ಯಾಂಡ್ ಫಿನಾಲೆಗೆ ಆಯ್ಕೆಯಾಗಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಕುಮಟಾದ ನಿರ್ಮಲ ಪಿ.ಯು. ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಜೇನ್ ರೋಡ್ರಿಗಿಸ್ ಮತ್ತು ಬೆಂಗಳೂರಿನ ಸ್ಟಿçÃಟ್ ಸ್ಟೇಟ್ ಗ್ಲೋಬಲ್ ಅಡ್ವೆöÊರ‍್ಸ್ ಕಂಪೆನಿಯ ಪ್ರಾಜೆಕ್ಟ್ ಮ್ಯಾನೇಜರ್’ರಾಗಿರುವ ನಂದೀಶ್ ಶೆಟ್ಟಿ ಅವರು ಜ್ಯೂರಿ ಸದಸ್ಯರಾಗಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಪ್ರಸ್ತುತಿಯನ್ನು ಮೌಲ್ಯಮಾಪನ ಮಾಡಿ, ಬಹುವಾಗಿ ಮೆಚ್ಚಿದರು. ಜೇನ್ ರೋಡ್ರಿಗಿಸ್ ಮಾತನಾಡಿ “ಈ ರೀತಿಯ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯ, ತಂಡ ಕಾರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಅತೀ ಅವಶ್ಯಕ ಎಂದು ಹೇಳಿ ಕಾಲೇಜಿನ ಕ್ರಮವನ್ನು ಶ್ಲಾಘಿಸಿದರು”. ನಂದೀಶ್ ಶೆಟ್ಟಿ ಮಾತನಾಡಿ “ಭಟ್ಕಳದಂತಹ ನಗರದಲ್ಲಿ ಈ ಕಾಲೇಜಿನ ಮೂಲಕ ಅತ್ಯುತ್ತಮ ಕಾರ್ಯಕ್ರಮಗಳು, ಸ್ಪರ್ಧೆಗಳು ಆಯೋಜಿಸುವ ಮೂಲಕ, ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿ ವಿದ್ಯಾರ್ಥಿಗಳನ್ನು ಪ್ರೇರೆಪಿಸುತ್ತಿದೆ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು”.

ಈ ಕಾರ್ಯಕ್ರಮದ ಸಂಯೋಜಕರಾಗಿ ಬಿಬಿಎ ವಿಭಾಗದ ಉಪನ್ಯಾಸಕಿ ಐಶ್ವರ್ಯ ಐಗೋಡ್ ಅವರು ಸಕ್ರಿಯವಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಬಿಬಿಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ, ಪ್ರಾಂಶುಪಾಲ ಶ್ರೀನಾಥ ಪೈ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಿಜ್ ಲೀಡ್ ಎಕ್ಸ್ 2025-26ರ ವಿಜೇತರಾಗಿ ಸತ್ಯೇಶ ಕಾಮತ್, ಪ್ರಥಮ ರನ್ನರ್ ಅಪ್ ಆಗಿ ಶ್ರೀನಿಧಿ ಶೆಟ್ಟಿ ಹಾಗೂ ದ್ವಿತೀಯ ರನ್ಸರ್ ಅಪ್ ಆಗಿ ಶ್ರಿಯಾ ಪುರಾಣಿಕ್ ಅಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದರು. ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

More Stories
ಬಕ್ರೀದ್ ಹಿನ್ನೆಲೆ ಭಟ್ಕಳದಲ್ಲಿ ಕಟ್ಟೆಚ್ಚರ: ಮೇ 30ರವರೆಗೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲೇ ಇರಲು ಸೂಚನೆ
ಮನೆ ಕಳ್ಳತನ ಪ್ರಕರಣ: 8 ಗಂಟೆಯೊಳಗೆ ಆರೋಪಿಗಳ ಬಂಧನ
ಮೇ 24 ರಂದು ಗಾನಸಿರಿ ಸೀಜನ್-1: ಭಟ್ಕಳದಲ್ಲಿ ಗಾಯನ ಕಣ ರಂಗೇರಲು ಸಜ್ಜು