May 23, 2026

ಮೇ 24 ರಂದು ಗಾನಸಿರಿ ಸೀಜನ್-1: ಭಟ್ಕಳದಲ್ಲಿ ಗಾಯನ ಕಣ ರಂಗೇರಲು ಸಜ್ಜು

ಗಾನಸಿರಿ ಗಾಯನ ರಂಗಕ್ಕೆ ಸಿನಿ ಸಂಗೀತ ದಿಗ್ಗಜರ ಆಗಮನ

ಭಟ್ಕಳ: ಪವಿತ್ರಾ ಚಾರಿಟೇಬಲ್ ಟ್ರಸ್ಟ್ ಹನುಮಾನನಗರ ಭಟ್ಕಳ ಇದರ ಆಶ್ರಯದಲ್ಲಿ ಮೇ 24ರಂದು ಇಲ್ಲಿನ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟ್ರಮಣ ದೇವಸ್ಥಾನ ಸಭಾಭವನದಲ್ಲಿ ಗಾನಸಿರಿ ಸ್ಟಾರ್ ಸಿಂಗರ್ ಸೀಜನ್-1 ರಿಯಾಲಿಟಿ ಶೋ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕುರಿತು ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟ್ರಮಣ ದೇವಸ್ಥಾನ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗು ಗಾಯಕಿ ಪವಿತ್ರಾ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಭಟ್ಕಳದ ಪ್ರತಿಭೆಯಾಗಿರುವ ಪವಿತ್ರಾ ನಾಯ್ಕ ತಮ್ಮ ಗಾಯನ ಸಾಧನೆಯಿಂದ ರಾಜ್ಯದ ನಾನಾ ಭಾಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಅನೇಕ ಸಂಘ-ಸAಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಅವರ ನೇತೃತ್ವದಲ್ಲಿ ಯುವ ಕಲಾವಿದರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪವಿತ್ರಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ, ಮೊದಲ ಬಾರಿಗೆ ಗಾಯನಕ್ಕೆ ಸಂಬAಧಿಸಿದAತೆ ಭಟ್ಕಳದಲ್ಲಿ ರಿಯಾಲಿಟಿ ಶೋ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ ವಿವಿಧೆಡೆಯಿಂದ 200ಕ್ಕೂ ಹೆಚ್ಚು ಗಾಯಕ, ಗಾಯಕಿಯರು ಆನ್‌ಲೈನ್ ಆಡಿಶನ್‌ನಲ್ಲಿ ಪಾಲ್ಗೊಂಡಿದ್ದು, ಅಂತಿಮವಾಗಿ ಸ್ಪರ್ಧೆಗೆ 30 ಗಾಯಕ, ಗಾಯಕಿಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಸಂಗೀತ ನಿರ್ದೇಶಕ ವಿ. ಮನೋಹರ, ಜನಪದ ಕಲಾವಿದ ಶ್ರೀ ಗುರುರಾಜ ಹೊಸಕೋಟೆ, ಸಂಗೀತ ನಿರ್ದೇಶಕಿ ಚಲನಚಿತ್ರ ಗಾಯಕಿ ಮಾನಸ ಹೊಳ್ಳ, ಚಲನಚಿತ್ರ ಗಾಯಕ ರಮೇಶ ಚಂದ್ರ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ. ಉಪನ್ಯಾಸಕ ಜಗದೀಶ ನಾಯ್ಕ, ಸಮಾಜ ಸೇವಕ ಕೆ.ಆರ್. ನಾಯ್ಕ, ಕುಂದಾಪುರದ ಶಿಕ್ಷಕಿ ಪಾರ್ವತಿ ಮದ್ದೂಡಿ, ಬೆಂಗಳೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಸಕಾಕ ಸಿ. ಜಯಲಕ್ಷ್ಮೀ ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಟ್ಕಳ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಅರುಣ ನಾಯ್ಕ, ಕಾರ್ಯದರ್ಶಿ ಡಿ.ಎಲ್. ನಾಯ್ಕ, ಕಾರ್ಯಕ್ರಮ ಸಂಯೋಜಕ ಶ್ರೀಧರ ನಾಯ್ಕ ಆಸರಕೇರಿ, ಗೋವಿಂದ ನಾಯ್ಕ ಹನುಮಾನ ನಗರ, ಪವಿತ್ರಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಮಂಜುನಾಥ ನಾಯ್ಕ ಮುಂಡಳ್ಳಿ, ಗಾಯಕಿ ಪವಿತ್ರಾ ನಾಯ್ಕ ಸುರೇಶ ನಾಯ್ಕ ಉಪಸ್ಥಿತರಿದ್ದರು.

About The Author

error: Content is protected !!