ಕೃಷ್ಣರಾಜಪೇಟೆ: ಪಟ್ಟಣದ ಶ್ರವಣಬೆಳಗೊಳ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಿಂದ ಧರ್ಮಗುರು ನೂರುದ್ದೀನ್ ಶರೀಫ್ ಅವರ ನೇತೃತ್ವದಲ್ಲಿ ಸಾಮೂಹಿಕ ಮೆರವಣಿಗೆ ನಡೆಸಿ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಈಗ ಮೈದಾನದ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ ಪರಸ್ಪರ ಶುಭಾಶಯಗಳು ಮುಸ್ಲಿಂ ಬಾಂಧವರು ವಿನಿಮಯ ಮಾಡಿಕೊಂಡರು.

ಧರ್ಮ ಗುರು ನೂರುದ್ದೀನ್ ಶರೀಫ್ ಅವರು ಧಾರ್ಮಿಕ ಪ್ರವಚನ ನೀಡಿ ಎಲ್ಲಾ ಧರ್ಮಗಳ ಸಾರವು ಒಂದೇ ಆಗಿದ್ದು ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದಾಗಿದೆ ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಈ ಬಾರಿ ವಿಶೇಷವಾಗಿ ದಾನ ಧರ್ಮ ಮಾಡುವ ಮೂಲಕ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ ಬಕ್ರೀದ್ ಹಬ್ಬವೂ ಈ ಬಾರಿ ವಿಶೇಷವಾಗಿ ನಡೆದಿದ್ದು ಬಡವರು ಶ್ರೀಮಂತರು ಎಂಬ ಭೇದ ಭಾವ ಇಲ್ಲದಂತೆ ಎಲ್ಲರೂ ಒಂದಾಗಿ ಬಕ್ರೀದ್ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿ ಸಂತೋಷದಿAದ ಬಕ್ರೀದ್ ಹಬ್ಬವನ್ನು ಆಚರಿಸಿರುವುದು ವಿಶೇಷವಾಗಿದೆ ಎಂದು ಧರ್ಮ ಗುರುಗಳು ಹೇಳಿದರು. ನಾಗಮಂಗಲ ಡಿಒ ಎಸ್ ಪಿ ಚೆಲುವರಾಜು ಹಾಗೂ ಕೆ ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು ಸಾಮೂಹಿಕ ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯಗಳು ವಿನಿಮಯ ಮಾಡಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹಿಸಿ ಕೆ.ಆರ್. ಪೇಟೆಯಲ್ಲಿ ರೈತ ಸಂಘದಿಂದ ಪ್ರತಿಭಟನೆ
ರೇವತಿ ನಕ್ಷತ್ರದಂದು ಭೂವರಹನಾಥ ಕ್ಷೇತ್ರಕ್ಕೆ ಭಕ್ತ ಸಾಗರ
ರೈತಸ್ನೇಹಿ ಅಧಿಕಾರಿ ರಾಮೇಗೌಡರಿಗೆ ಹೃದಯಸ್ಪರ್ಶಿ ನಿವೃತ್ತಿ ಸನ್ಮಾನ