ಚಿಕ್ಕೋಡಿ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡ ಅವರ 60ನೇ ಹುಟ್ಟುಹಬ್ಬದ ಅಂಗವಾಗಿ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸುವ ಕಾರ್ಯಕ್ರಮ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷ ಸಂಜು ಬಡಿಗೇರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ನಾರಾಯಣ ಗೌಡರು ಕನ್ನಡ ನೆಲ, ಜಲ, ಗಡಿ ಹಾಗೂ ಭಾಷೆಯ ವಿಚಾರಗಳಲ್ಲಿ ಕನ್ನಡಿಗರ ಪರವಾಗಿ ನಿರಂತರ ಹೋರಾಟ ನಡೆಸುತ್ತಿದ್ದು, ಅವರ ಸೇವೆ ಕನ್ನಡ ಮನಸ್ಸುಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಜು ಬಡಿಗೇರ, ನಾರಾಯಣ ಗೌಡರು ಕನ್ನಡ ನಾಡು ಮತ್ತು ನುಡಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಶಾಲಾ ಸಾಮಗ್ರಿ ವಿತರಣೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ವರ್ಷ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಅವರ ಆಯುರಾರೋಗ್ಯಕ್ಕಾಗಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಮೂಲ ನಾವಿ, ಅನೀಲ ನಾವಿ, ರಫೀಕ್ ಪಠಾಣ, ರುದ್ರಯ್ಯಾ ಹಿರೇಮಠ, ಡಾ. ವರ್ಧಮಾನ ಬದನಿಕಾಯಿ, ಡಾ. ವಿಶಾಲ ಹಡಪದ, ರಮೇಶ ಡಂಗೇರ, ಸಚಿನ್ ದೊಡ್ಡಮನಿ, ಶುಭಂ ಕದಂ, ಸುರೇಶ್ ಮಾನೆ, ರಾಜೇಂದ್ರ ಕಾಂಬಳೆ, ಸತ್ಯಪ್ಪಾ ಕಾಂಬಳೆ, ಸೋಮೇಶ ಮಿರ್ಜೆ, ಮಲ್ಲಪ್ಪಾ ಡೋನವಾಡೆ, ಸುನೀಲ ತೇರದಾಳೆ, ಭೀಮಾ ಶಿರಗಾವೆ, ಖಾನಪ್ಪಾ ಬಾಡಕರ, ಶಿವಾಜಿ ಖಾಡೆ, ಸಂಜಯ ಬೇವಿನಗಿಡದ, ಮಲ್ಲಿಕಾರ್ಜುನ ಕರೋಶಿ, ಯಾಸೀನ್ ಜಮಾದಾರ ಸೇರಿದಂತೆ ನೂರಾರು ಕನ್ನಡ ಸೇನಾನಿಗಳು ಉಪಸ್ಥಿತರಿದ್ದರು.

About The Author


More Stories
ಕಾಗವಾಡದಲ್ಲಿ ವಸತಿಗೆ ಅಲೆಯುತ್ತಿರುವ ಮಂಗಳಮುಖಿ: ತಕ್ಷಣದ ಪರಿಹಾರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚನೆ
ವಿದ್ಯಾರ್ಥಿ ಗೌತಮ್ ಅನುಮಾನಾಸ್ಪದ ಸಾವು: ಆರೋಪಿಗಳ ಬಂಧನಕ್ಕೆ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಚಿಕ್ಕಬಳ್ಳಾಪುರ ಅಗ್ನಿಶಾಮಕ ಇಲಾಖೆಯ ಸಮಯಪ್ರಜ್ಞೆ: ಆಳವಾದ ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಸಿಬ್ಬಂದಿ