ಭಟ್ಕಳ: ತಾಲೂಕಿನ ಪಡುಶಿರಾಲಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚಿಪ್ಪಿಕಲ್ಲು ತೆಗೆಯಲು ನದಿಗೆ ಹೋಗಿ ದುರಂತ ಸಾವಿಗೀಡಾಗಿದ್ದ 11 ಜನರ ಸಂತ್ರಸ್ತ ಮಕ್ಕಳನ್ನು ಭೇಟಿಯಾದ ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ಪಾಟುಪಕರಣಗಳು ಹಾಗೂ ಇತರೆ ಅಗತ್ಯ ಸಾಮಗ್ರಿಗಳನ್ನು ನೀಡಿ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಕಾರ್ಯ ಮಾಡಿದೆ.

ಸಂತ್ರಸ್ತ ಮಕ್ಕಳಿಗೆ ಬಟ್ಟೆ ಬ್ಯಾಗು, ನೋಟ್ ಬುಕ್, ಕಂಪಾಸ್ ಬಾಕ್ಸ್, ರೇನ್ ಕೋಟ್, ಛತ್ರಿ, ನೋಟ್ ಬುಕ್, ಹಾಗೂ ಇತರೆ ಕಲಿಕಾ ಸಾಮಗ್ರಿಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆಯವರು ನಡೆದ ಘಟನೆ ಅದು ಕರಾಳ ಘಟಣೆಯಾಗಿದ್ದು ನೀವು ಕಳೆದುಕೊಂಡ ನಿಮ್ಮ ಪಾಲಕರನ್ನ ತಂದುಕೊಡುವ ಶಕ್ತಿ ನಮಗಿಲ್ಲ. ಅದನ್ನ ವಿಧಿಯ ಅಟ್ಟಹಾಸವೇ ಎನ್ನಬೇಕು. ನೀವೆಲ್ಲ ಆ ಶೋಖದಲ್ಲಿಯೇ ಈಗಲೂ ಇದ್ದೀರಿ ಎಂಬ ಅರಿವು ನಮಗಿದೆ. ಆದರೆ ನಿಮ್ಮ ಮುಂದಿನ ಬದುಕನ್ನು ಇನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕಾಗಿ ನೀವು ಮಾನಸಿಕವಾಗಿ ಸಿದ್ದರಾಗಬೇಕಿದೆ. ಯಾವುದೇ ಕಾರಣಕ್ಕೂ ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸದೆ, ನೀವು ಆಯ್ಕೆ ಮಾಡಿಕೊಂಡ ಶಿಕ್ಷಣ ಪೂರ್ಣಗೊಳಿಸುವ ಮೂಲಕ ಬದುಕಿನ ಭದ್ರತೆಗಾಗಿ ಉದ್ಯೋಗವನ್ನು ಕಂಡುಕೊಳ್ಳಬೇಕಾಗಿದೆ. ಆ ಮೂಲಕ ಕಳೆದುಕೊಂಡ ಪಾಲಕರ ಆತ್ಮಕ್ಕೆ ಶಾಂತಿಯನ್ನು ನೀಡುವ ಕಾರ್ಯ ಮಾಡಬೇಕಾಗಿದೆ. ನಾವೆಲ್ಲ ಮಾನಸಿಕವಾಗಿ ಮನುಷ್ಯತ್ವದ ನೆಲೆಯಲ್ಲಿ ನಿಮ್ಮ ಜೊತೆ ಇರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್ ನಾಯ್ಕ, ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷರಾದ ಉಮೇಶ ಕೆರೆಕಟ್ಟೆ, ಸಾಹಿತಿಗಳಾದ ಶಂಭು ಹೆಗಡೆ, ಶ್ರೀಧರ ಶೇಟ್,ಜಿಲ್ಲಾ ಪದಾಧಿಕಾರಿ ಪಿ.ಎಮ್.ಮುಕ್ರಿ, ಪತ್ರಕರ್ತರಾದ ವಿಷ್ಣುದೇವಡಿಗ, ಅಕ್ಷಯಗಿರಿ ಗೋಸಾವಿ, ಮಂಜುನಾಥ ಅಂಬಿಗೇರ, ಊರ ಪ್ರಮುಖರಾದ ವಾಸು ನಾಯ್ಕ, ಕೃಷ್ಣ ನಾಯ್ಕ, ಮಂಜುನಾಥ ನಾಯ್ಕ, ಮಾದೇವ ನಾಯ್ಕ ಮತ್ತು ವಿದ್ಯಾರ್ಥಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ತನ್ಮಯಿ, ಯುಗ, ಯಾಮಿನಿ, ಯಶಸ್ವಿ, ಕಾಂಚನ, ಸಿಂಚನಾ, ಚೇತನಾ, ತಮನ್ನ, ಸೋನಿಯಾ, ಕೌಶಿಕ, ಉನ್ನತಿ, ಉಲ್ಲಾಸ, ಕೀರ್ತನಾ, ಸವಿತಾ ಮುಂತಾದವರು ಉಪಸ್ಥಿತರಿದ್ದರು.

More Stories
ಪ್ರತಿಷ್ಠಿತ ‘ಡಿಜಿ-ಐಜಿಪಿ ಶ್ಲಾಘನಾ ಪದಕ’ ಗೌರವಕ್ಕೆ ಭಾಜನರಾದ ಭಟ್ಕಳದ ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕ
ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ಸಿಗೆ ಇಲಾಖೆಗಳ ಸಮನ್ವಯ ಅಗತ್ಯ: ಪ್ರಭಾರಿ ತಹಶೀಲ್ದಾರ್ ಪ್ರವೀಣ್ ಕಾರಂಡೆ
ಸಿಎ ಅಂತಿಮ ಪರೀಕ್ಷೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಪ್ರಜ್ವಲ್ ಗೋಳಿ ಮತ್ತು ಪ್ರಸಾದ ಶೆಟ್ಟಿ ಸಾಧನೆ