June 23, 2026

ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ ಅವರಿಗೆ ಸನ್ಮಾನ:

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪ್ರಮುಖ ಕಾಂಗ್ರೆಸ್ ಪಕ್ಷದ ಮುಖಂಡರಾದ ಚಿದಾನಂದ ಸವದಿ ಅವರಿಗೆ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಹಾಗೂ ವಸತಿ ರಹಿತರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ನಿವೇಶನಕ್ಕಾಗಿ ಸ್ಥಳದಲ್ಲೇ ಅಧಿಕಾರಿಗೆ ಕರೆ ಮಾಡಿದ ಮುಖಂಡ

ಕಳೆದ ಒಂಬತ್ತು ವರ್ಷಗಳಿಂದ ಮದಭಾವಿ ಗ್ರಾಮದಲ್ಲಿ ವಾಸಿಸುತ್ತಿರುವ ಮಂಗಳಮುಖಿ ರಂಜಾನ್ ಮುಲ್ಲಾ ಅವರು ತಮಗೆ ವಾಸಿಸಲು ಸ್ವಂತ ನಿವೇಶನ (ಜಾಗ) ಇಲ್ಲದಿರುವ ಬಗ್ಗೆ ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ ಅವರಿಗೆ ಮನವಿ ಸಲ್ಲಿಸಿದರು. ಮನವಿಗೆ ತಕ್ಷಣವೇ ಸ್ಪಂದಿಸಿದ ಚಿದಾನಂದ ಸವದಿ ಅವರು, ಸಾರ್ವಜನಿಕರ ಸಮ್ಮುಖದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಸದರಿ ಮಂಗಳಮುಖಿಗೆ ನಿಯಮಾನುಸಾರ ವಾಸಿಸಲು ನಿವೇಶನ ಜಾಗವನ್ನು ಮಂಜೂರು ಮಾಡಿಕೊಡಬೇಕೆಂದು ಸ್ಥಳದಲ್ಲೇ ಸೂಚನೆ ನೀಡಿದರು. ಮುಖಂಡರ ಈ ತಕ್ಷಣದ ಸ್ಪಂದನೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಯಿತು.

ರೈತರ ಸಮಸ್ಯೆಗಳಿಗೆ ಸಿಗುವುದೇ ಶಾಶ್ವತ ಪರಿಹಾರ?
ಇಂತಹ ಸ್ಥಳೀಯ ವಸತಿ ಮತ್ತು ಆಡಳಿತಾತ್ಮಕ ಸಮಸ್ಯೆಗಳ ನಡುವೆ, ದೇಶದ ಬೆನ್ನೆಲುಬಾದ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರ, ಪ್ರಧಾನಮಂತ್ರಿಗಳು ಮತ್ತು ರಾಷ್ಟ್ರಪತಿಗಳವರೆಗೆ ಎಲ್ಲಾ ಹಂತದ ವ್ಯವಸ್ಥೆಗಳು ಇನ್ನು ಮುಂದಾದರೂ ಗಂಭೀರವಾಗಿ ಯೋಚಿಸಿ, ರೈತರ ಕಷ್ಟಗಳಿಗೆ ಶಾಶ್ವತ ಪರಿಹಾರ ನೀಡಲು ಮುಂದಾಗುತ್ತಾರೆಯೇ ಎಂಬ ಯಕ್ಷಪ್ರಶ್ನೆ ಇಂದಿಗೂ ಕಾಡುತ್ತಿದೆ.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮುಖರು

ಈ ಸನ್ಮಾನ ಹಾಗೂ ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ ನಾಯಿಕ, ಮುಖಂಡರಾದ ಶರಣಪ್ಪ ಸಿಂಧೆ, ಅನಿಲ ಭಾಮನೆ, ಕಿರಣ ಪಾಟೋಳೆ, ಎಂ. ಶರ್ಮಾ, ಅಮೂಲ ಚವಾಣ ಹಾಗೂ ಶಿವಾನಂದ ನಾವಿ ಉಪಸ್ಥಿತರಿದ್ದರು.


ಅಲ್ಲದೆ ಪ್ರಮುಖ ಮಹಿಳಾ ಮುಖಂಡರಾದ ಕವಿತಾ ಬೋಸ್ಲೆ, ಸರಸ್ವತಿ ನ್ಯಾಮಗೌಡ, ರೇಷ್ಮಾ ತೇಲಿ, ಶಾಂತಾ ಶಿಂಧೆ, ಸಾವಿತ್ರಿ ಬಡಿಗೇರ, ಉಜ್ವಲ ಪಾಟೋಳೆ ಸೇರಿದಂತೆ ಇನ್ನು ಅನೇಕ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು.
ವರದಿ : ಮಹೇಶ ಶರ್ಮ

About The Author

error: Content is protected !!