June 23, 2026

ಹೊನ್ನಾವರ ತಾಲೂಕಿನಾದ್ಯಂತ  57ಕ್ಕೂ ಹೆಚ್ಚು ಕಡೆ ‘ದಶ ಲಕ್ಷ ಗಿಡ ನೆಡುವ ಅಭಿಯಾನ’ಕ್ಕೆ ಅರಣ್ಯವಾಸಿಗಳಿಂದ ಭರ್ಜರಿ ಚಾಲನೆ!

ಹೊನ್ನಾವರ: “ಅರಣ್ಯವಾಸಿಗಳು ಅರಣ್ಯದ ಅವಿಭಾಜ್ಯ ಅಂಗ. ಅರಣ್ಯ ಭೂಮಿ ಹಕ್ಕಿನ ಹೋರಾಟದೊಂದಿಗೆ ಅರಣ್ಯ ಮತ್ತು ಪರಿಸರವನ್ನು ಉಳಿಸಿ ಬೆಳೆಸುವ ಜಾಗೃತಿ ಸಂದೇಶ ಸಾರುವುದು ನಮ್ಮ ಜವಾಬ್ದಾರಿ” ಎಂದು ಜಿಲ್ಲಾ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ ತಿಳಿಸಿದ್ದಾರೆ. ತಾಲೂಕಾದ್ಯಂತ ಹಮ್ಮಿಕೊಳ್ಳಲಾದ ಮಹತ್ವಾಕಾಂಕ್ಷೆಯ ‘ದಶ ಲಕ್ಷ ಗಿಡ ನೆಡುವ ಅಭಿಯಾನ’ಕ್ಕೆ ಅರಣ್ಯವಾಸಿಗಳು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.

57ಕ್ಕೂ ಅಧಿಕ ಸ್ಥಳಗಳಲ್ಲಿ ಹಸಿರು ಕ್ರಾಂತಿ

ತಾಲೂಕಿನ ಗ್ರಾಮೀಣ ಹಾಗೂ ಹಳ್ಳಿ ಪ್ರದೇಶಗಳಾದ ಮಾಗೋಡ, ಮುಗ್ವಾ, ಸಾಲ್ಕೋಡ, ಹೇರಂಗಡಿ, ಚಿತ್ತಾರ, ಪ್ರಭಾತನಗರ, ಹಡಿನಬಾಳ, ಗೇರಸೊಪ್ಪ, ನಗರಬಸ್ತಿಕೇರಿ, ಕುದ್ರಗಿ, ಚಿಕ್ಕನಗೋಡ, ಮತ್ತು ಉಪ್ಪೋಣಿ ವ್ಯಾಪ್ತಿಯ 57 ಕ್ಕೂ ಅಧಿಕ ಕಡೆಗಳಲ್ಲಿ ಅರಣ್ಯವಾಸಿಗಳು ಏಕಕಾಲಕ್ಕೆ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಈ ಬೃಹತ್ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.

21 ದಿನಗಳಲ್ಲಿ ಒಂದು ಲಕ್ಷ ಗಿಡ ನೆಡುವ ಮಹತ್ಕಾಂಕ್ಷೆಯ ಗುರಿ

ವಿಶೇಷ ಯೋಜನೆ: ಗ್ರೀನ್ ಕಾರ್ಡ್ ಹೊಂದಿರುವವರು ಹಾಗೂ ಅರಣ್ಯವಾಸಿಗಳು ಜೊತೆಗೂಡಿ ಇಂದಿನಿಂದ (ಜೂನ್ 21) ಜುಲೈ 11ರವರೆಗೆ ಒಟ್ಟು 21 ದಿನಗಳ ಕಾಲ ಈ ನಿರಂತರ ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಅವಧಿಯಲ್ಲಿ ಹೊನ್ನಾವರ ತಾಲೂಕಾದ್ಯಂತ 1 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದ್ದು, ಆ ಮೂಲಕ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ‘ದಶ ಲಕ್ಷ (10 ಲಕ್ಷ) ಗಿಡ ನೆಡುವ’ ಬೃಹತ್ ಸಂಕಲ್ಪಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಮಹೇಶ್ ನಾಯ್ಕ ಕಾನಕ್ಕಿ ತಿಳಿಸಿದ್ದಾರೆ.

ಅಭಿಯಾನದ ನೇತೃತ್ವ ವಹಿಸಿದ ಪ್ರಮುಖರು

ತಾಲೂಕಿನ ವಿವಿಧೆಡೆ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ಸ್ಥಳೀಯ ಪ್ರಮುಖರು ಮುಂಚೂಣಿಯಲ್ಲಿ ನಿಂತು ಯಶಸ್ವಿಗೊಳಿಸಿದರು:

ಮಹೇಶ ನಾಯ್ಕ ಕಾನಳ್ಳಿ, ರಾಮಾ ಮರಾಠಿ ಯಲಕೋಟಗಿ, ಗಿರೀಶ ನಾಯ್ಕ ಚಿತ್ತಾರ, ವಿನೋದ ನಾಯ್ಕ, ಸುರೇಶ ಮೇಸ್ತಾ (ನಗರಾಧ್ಯಕ್ಷರು, ನಗರಬಸ್ತಿಕೇರಿ).ದಾವೂದ್ ಇಬ್ರಾಹಿಂ ಹೊನ್ನಾವರ, ಥೋಮಸ್ ಲೋಬೋ ಮಾಗೋಡ, ಆಸೀಸ್ ಅಲೇಸ್ ಲೋಬೋ ಬೀರನಗೋಡ, ಶ್ರೀಕಾಂತ್ ಎನ್. ನಾಯ್ಕ ಉಪ್ಪೋಣಿ, ಪ್ರದೀಪ್ ಕಬ್ಬಗೇರಿ, ಗಣೇಶ ನಾಯ್ಕ ನಗರಬಸ್ತೀಕೇರಿ. ಹೇಮಲತಾ ಸಿ. ನಾಯ್ಕ ಅರೇಅಂಗಡಿ, ಸರಸ್ವತಿ ನಾಯ್ಕ, ಲಕ್ಷ್ಮೀ ಮುಕ್ರಿ, ಹೇಮಲತ ಮಡಿವಾಳ, ಮಮತಾ ಜೋಗಿ. ಜನಾರ್ಧನ್ ಸತ್ಯಪ್ಪ ನಾಯ್ಕ ಚಂದಾವರ, ಗಣೇಶ ಮಂಜುನಾಥ ನಾಯ್ಕ ಚಂದಾವರ, ವಿನೋದ ಮಂಜುನಾಥ ನಾಯ್ಕ ಜಲವಳ್ಳಿ ಸೇರಿದಂತೆ ನೂರಾರು ಅರಣ್ಯವಾಸಿಗಳು ಭಾಗವಹಿಸಿದ್ದರು.                                     ವರದಿ ; ವಿಶ್ವನಾಥ ಸಾಲ್ಕೋಡ

About The Author

error: Content is protected !!