ಭಟ್ಕಳ: ತಾಲೂಕಿನಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಇದರ ಅಂಗವಾಗಿ ಮನೆ-ಮನೆಗೆ ಎನ್ಯೂಮರೇಷನ್ (ಇಎಫ್) ಫಾರಂ ವಿತರಿಸುವ ಕಾರ್ಯಕ್ರಮಕ್ಕೆ ತಹಶೀಲ್ದಾರರಾದ ಪ್ರವೀಣ ಕಾರಂಡೆ ಅವರು ಚಾಲನೆ ನೀಡಿದರು.
ಇಲ್ಲಿನ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಫ್ಸಾ ಹುಝೈಪಾ ಖಾಜಿಯಾ ಅವರ ನಿವಾಸಕ್ಕೆ ಭೇಟಿ ನೀಡಿದ ತಹಶೀಲ್ದಾರರು, ವಾರ್ಡ್ ಸಂಖ್ಯೆ 221ರ ಬಿಎಲ್ಒ (BLO) ಸಣ್ಣು ಗೊಂಡ ಅವರ ಮೂಲಕ ಎನ್ಯೂಮರೇಷನ್ ಫಾರಂ ಅನ್ನು ಹಸ್ತಾಂತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಸಾರ್ವಜನಿಕರಿಗೆ ತಹಶೀಲ್ದಾರರ ಮನವಿ:
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಪ್ರವೀಣ ಕಾರಂಡೆ ಅವರು, “ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅತ್ಯಂತ ಪ್ರಮುಖವಾಗಿದ್ದು, ಸಾರ್ವಜನಿಕರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮನೆ-ಮನೆಗೆ ವಿತರಿಸಲಾಗುವ ಎನ್ಯೂಮರೇಷನ್ ಫಾರಂ ಅನ್ನು ಅಗತ್ಯವಿರುವ ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಿ, ನಿಮ್ಮ ಭಾಗದ ಸಂಬಂಧಿಸಿದ ಬಿಎಲ್ಒಗಳಿಗೆ ಸಕಾಲದಲ್ಲಿ ಸಲ್ಲಿಸಬೇಕು” ಎಂದು ವಿನಂತಿಸಿಕೊಂಡರು.
ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಗೈರುಹಾಜರಿ/ಸ್ಥಳಾಂತರಗೊಂಡ ಮತದಾರರ ವಿವರಗಳ ಪರಿಶೀಲನೆಗೆ ಈ ಅಭಿಯಾನವು ಅತ್ಯಂತ ಸಹಕಾರಿಯಾಗಿದ್ದು, ನಾಗರಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.

About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ