July 15, 2026

ಹೊನ್ನಾವರ ಅರ್ಬನ್ ಬ್ಯಾಂಕ್‌ನಿAದ “ಸಹಕಾರದಿಂದ ಸಮೃದ್ಧಿ” ಧ್ಯೇಯದೊಂದಿಗೆ ಹಣ್ಣು-ಹಂಪಲು ಗಿಡ ನೆಡುವ ವಿನೂತನ ಕಾರ್ಯಕ್ರಮ

ಕೇಂದ್ರ ಸಹಕಾರ ಸಚಿವಾಲಯದ 5ನೇ ವರ್ಷದ ಹಿನ್ನೆಲೆ: ಹೊಸಾಕುಳಿಯಲ್ಲಿ ಹಸಿರು ಅಭಿಯಾನ

ಹೊನ್ನಾವರ: ಕೇಂದ್ರ ಸಹಕಾರ ಸಚಿವಾಲಯವು ಸ್ಥಾಪನೆಯಾಗಿ 5 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ, ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಹೊಸಾಕುಳಿ ಗ್ರಾಮದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ “ಹಣ್ಣು-ಹಂಪಲು ಗಿಡಗಳನ್ನು ನೆಡುವ ಕಾರ್ಯಕ್ರಮ”ವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಅರಣ್ಯ ಇಲಾಖೆ, ವ್ಯವಸಾಯ ಸೇವಾ ಸಹಕಾರಿ ಸಂಘ ಹೊಸಾಕುಳಿ ಮತ್ತು ಕಿಸಾನ್ ಯೂನಿಯನ್ ಹೊನ್ನಾವರ ಇವರುಗಳ ಜಂಟಿ ಸಹಯೋಗದೊಂದಿಗೆ, “ಸಹಕಾರದಿಂದ ಸಮೃದ್ಧಿ” ಎಂಬ ಉದಾತ್ತ ಧ್ವೇಯೋದ್ದೇಶದೊಂದಿಗೆ ಜುಲೈ 6, 2026 ರಂದು ಈ ಪರಿಸರ ಕಾಳಜಿಯ ಅಭಿಯಾನ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಗ್ರಾಮದ ಆಯ್ದ ಭಾಗಗಳಲ್ಲಿ ಪರಿಸರಕ್ಕೆ ಪೂರಕವಾದ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ವಿವಿಧ ತಳಿಯ ಹಣ್ಣು-ಹಂಪಲು ನೀಡುವ ಸಸಿಗಳನ್ನು ನೆಡಲಾಯಿತು. ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಮತ್ತು ಗ್ರಾಮೀಣ ಭಾಗವನ್ನು ಹಸಿರಾಗಿಸುವಲ್ಲಿ ಸಹಕಾರಿ ವಲಯದ ಇಂತಹ ಸಮಾಜಮುಖಿ ಕಾರ್ಯಗಳು ಪ್ರೇರಣಾದಾಯಕವಾಗಿವೆ ಎಂದು ಈ ಸಂದರ್ಭದಲ್ಲಿ ಗಣ್ಯರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹೊನ್ನಾವರ ಅರ್ಬನ್ ಬ್ಯಾಂಕ್‌ನ ನಿರ್ದೇಶಕರುಗಳಾದ ಶ್ರೀ ರಾಮದಾಸ್ ವೆಂಕಟೇಶ್ ಪ್ರಭು, ಶ್ರೀಮತಿ ತಾರಾ ನಾಯ್ಕ, ಶ್ರೀಮತಿ ಅಂಕಿತಾ ನಾಗರಾಜ ಕಾಮತ್ ಮತ್ತು ಶ್ರೀ ರತ್ನಾಕರ್ ದೇವಪ್ಪ ಪಾವಸ್ಕರ್ ಉಪಸ್ಥಿತರಿದ್ದರು.

ಅಲ್ಲದೆ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಹೊಸಾಕುಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳು, ಕಿಸಾನ್ ಯೂನಿಯನ್ ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

About The Author

error: Content is protected !!