ಭಟ್ಕಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉತ್ತರ ಕನ್ನಡ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ‘ದಿ ನ್ಯೂ ಇಂಗ್ಲೀಷ್ ಕಾಲೇಜಿ’ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಸಾಧನೆಗೈದ ಕ್ರೀಡಾಪಟುಗಳ ವಿವರ:
- ಅಕ್ಷಯ ಕೆಲ್ಸಿ: 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ
- ಜಯಂತ ಮರಾಠಿ: 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ
- ಶಿವರಾಜ ನಾಯ್ಕ: 110 ಮೀಟರ್ ಹರ್ಡಲ್ಸ್ನಲ್ಲಿ (ಅಡೆತಡೆ ಓಟ) ಪ್ರಥಮ ಸ್ಥಾನ
- 4×400 ಮೀಟರ್ ರಿಲೇ ತಂಡ: ಅಕ್ಷಯ ಕೆಲ್ಸಿ, ಜಯಂತ ಮರಾಠಿ ಹಾಗೂ ಶಿವರಾಜ ನಾಯ್ಕ ಅವರಿದ್ದ ತಂಡ ಪ್ರಥಮ ಸ್ಥಾನ
- ಸಂಜಯ ಗೊಂಡ: ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ
- ನಿತಿನ ಗೊಂಡ: 10,000 ಮೀಟರ್ ಓಟದಲ್ಲಿ ತೃತೀಯ ಸ್ಥಾನ
ಅಭಿನಂದನೆ: ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳನ್ನು ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಸುರೇಂದ್ರ ಶಾನಭಾಗ, ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶಾನಭಾಗ, ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ನಾಯ್ಕ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
About The Author


More Stories
ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಯೋಗ ಕಾರ್ಯಾಗಾರದ ಸಮಾರೋಪ
ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘಕ್ಕೆ ₹2.74 ಕೋಟಿ ಲಾಭ: 12% ಲಾಭಾಂಶ ಘೋಷಣೆ
ಭಟ್ಕಳದ ಎಐಟಿಎಂನಲ್ಲಿ ‘ಐಓಟಿ ಕ್ಲಬ್’ ಉದ್ಘಾಟನೆ: ಆಟೋಮೋಟಿವ್ ಐಓಟಿ ವೆಬಿನಾರ್ ಹಾಗೂ ಕಾರ್ಯಾಗಾರ