October 22, 2026

ಮಡಿಕೇರಿ: ಸಂಚಾರಿ ಪೊಲೀಸರಿಗೆ ಉಚಿತ ರಿಫ್ಲೆಕ್ಟರ್ ಜಾಕೆಟ್ ವಿತರಣೆ, ಆರೋಗ್ಯ ತಪಾಸಣಾ ಶಿಬಿರ

ಮಡಿಕೇರಿ: ಸಾರ್ವಜನಿಕ ಸೇವೆ ಹಾಗೂ ಸುರಕ್ಷತೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಪೊಲೀಸ್ ಸಿಬ್ಬಂದಿಯ ಹಿತದೃಷ್ಟಿಯಿಂದ ಮೈಸೂರಿನ ಕಾಂಗರೂ ಕೇರ್ ಆಸ್ಪತ್ರೆಯ ವತಿಯಿಂದ ಮಡಿಕೇರಿಯಲ್ಲಿ ವಿಶೇಷ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸುವ ಮಡಿಕೇರಿ ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿಯ ರಕ್ಷಣೆಗಾಗಿ ಆಸ್ಪತ್ರೆಯ ವತಿಯಿಂದ ಉಚಿತವಾಗಿ ರಿಫ್ಲೆಕ್ಟರ್ ಜಾಕೆಟ್‌ಗಳನ್ನು ವಿತರಿಸಲಾಯಿತು. ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಪೊಲೀಸರು ಸ್ಪಷ್ಟವಾಗಿ ಕಾಣಿಸುವ ಮೂಲಕ ಈ ಜಾಕೆಟ್‌ಗಳು ಕರ್ತವ್ಯನಿರತ ಸಿಬ್ಬಂದಿಯ ಸುರಕ್ಷತೆಯನ್ನು ಹೆಚ್ಚಿಸಲಿವೆ.

ಉಚಿತ ಆರೋಗ್ಯ ತಪಾಸಣೆ: ಇದೇ ಸಂದರ್ಭದಲ್ಲಿ ಮಡಿಕೇರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು. ನಿರಂತರ ಕರ್ತವ್ಯ ಹಾಗೂ ಸದಾ ಕೆಲಸದ ಒತ್ತಡದಲ್ಲಿರುವ ಪೊಲೀಸ್ ಸಿಬ್ಬಂದಿ ಈ ಶಿಬಿರದ ಸದುಪಯೋಗ ಪಡೆದುಕೊಂಡರು.

ಪೊಲೀಸ್ ಇಲಾಖೆಯ ಸಿಬ್ಬಂದಿಯ ಸುರಕ್ಷತೆ ಹಾಗೂ ಆರೋಗ್ಯದ ಕಾಳಜಿ ವಹಿಸಿ ಈ ಕಾರ್ಯಕ್ರಮ ರೂಪಿಸಿದ ಕಾಂಗರೂ ಕೇರ್ ಆಸ್ಪತ್ರೆಯ ಸಮಾಜಮುಖಿ ಸೇವೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

(ವರದಿ: ಪ್ರಿತುನ್ ಪೂವಣ್ಣ)

About The Author

error: Content is protected !!