October 22, 2026

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮರಿಗೆ ಶಾಸಕ ಮಂತರ್ ಗೌಡ ಅಭಿನಂದನೆ

ಮಡಿಕೇರಿ: ಜಪಾನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ 4×400 ರಿಲೇಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿರುವ ಕೊಡಗಿನ ಹೆಮ್ಮೆಯ ಕ್ರೀಡಾ ತಾರೆ ಎಂ.ಆರ್. ಪೂವಮ್ಮ (ಮಾಚೆಟ್ಟಿರ) ಅವರನ್ನು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು ಮಂಗಳೂರಿಗೆ ತೆರಳಿ ಆತ್ಮೀಯವಾಗಿ ಅಭಿನಂದಿಸಿದರು.

ಪೂವಮ್ಮ ಅವರ ಈ ಅದ್ಭುತ ಸಾಧನೆಗೆ ಶುಭ ಕೋರಿದ ಶಾಸಕರು, ಕ್ರೀಡಾಪಟುವಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ನೆರವು ಹಾಗೂ ಪ್ರೋತ್ಸಾಹವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

ಕೊಡಗಿನಿಂದ ಆಗಮಿಸಿ ತಮ್ಮ ಮಗಳನ್ನು ಗೌರವಿಸಿ ಅಭಿನಂದಿಸಿದ ಶಾಸಕ ಡಾ. ಮಂಥರ್ ಗೌಡ ಅವರಿಗೆ ಪೂವಮ್ಮ ಅವರ ಪೋಷಕರಾದ ಮಾಚೆಟ್ಟಿರ ರಾಜು ಮತ್ತು ಜಾಜಿ ದಂಪತಿ ಧನ್ಯವಾದ ಅರ್ಪಿಸಿದರು.

(ವರದಿ: ಪ್ರಿತುನ್ ಪೂವಣ್ಣ)

About The Author

error: Content is protected !!