ವಿರಾಜಪೇಟೆ: ಏಷ್ಯನ್ ಗೇಮ್ಸ್‌ನ 4×400 ರಿಲೇಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಕೊಡಗಿನ ಹೆಮ್ಮೆಯ ಕ್ರೀಡಾ ತಾರೆ ಮಾಚೆಟ್ಟಿರ ಪೂವಮ್ಮ ಅವರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದೂರವಾಣಿ ಮೂಲಕ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಪೂವಮ್ಮ ಅವರ ಈ ಸಾಧನೆಯು ಕೊಡಗು ಹಾಗೂ ಇಡೀ ಕರ್ನಾಟಕವೇ ಹೆಮ್ಮೆ ಪಡುವಂತದ್ದು ಎಂದು ಬಣ್ಣಿಸಿದ ಸಂಸದರು, ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಹಾಗೂ ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಇದೇ ವೇಳೆ ಕ್ರೀಡಾಪಟು ಪೂವಮ್ಮ ಅವರು ಶೀಘ್ರದಲ್ಲೇ ಸಂಸದರನ್ನು ಖುದ್ದಾಗಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ.
(ವರದಿ: ಪ್ರಿತುನ್ ಪೂವಣ್ಣ)

About The Author


More Stories
ಕೊಯನಾಡು ರಬ್ಬರ್ ಎಸ್ಟೇಟ್ ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ಪೊನ್ನಣ್ಣ ವಿಶೇಷ ಅನುದಾನದಿಂದ ಕಾಂಕ್ರೀಟೀಕರಣ
ಕೊಡಗಿನ ಪ್ರತಿಷ್ಠಿತ ‘ಗೌರಮ್ಮ ದತ್ತಿ ಪ್ರಶಸ್ತಿ’ಗೆ ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿ ಆಯ್ಕೆ
ವಿರಾಜಪೇಟೆಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ: ಶಾಸಕ ಪೊನ್ನಣ್ಣ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ