November 22, 2026

ಪವಿತ್ರ ಕೆ.ಬಿ. ಅವರಿಗೆ ‘ಯೋಗ ಜ್ಯೋತಿ ಪ್ರಶಸ್ತಿ – ೨೦೨೬’ ಗೌರವ

೯ ವರ್ಷಗಳಿಂದ ಉಚಿತ ಯೋಗ ತರಬೇತಿ ನೀಡುತ್ತಿರುವ ಸಾಧಕಿಗೆ ಒಲಿದ ಪುರಸ್ಕಾರ

ವಿರಾಜಪೇಟೆ: ಉಚಿತ ಯೋಗ ತರಬೇತಿಯ ಮೂಲಕ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿರುವ ಬಲ್ಲಮಾವಟಿ ಎಡಿಕೇರಿಯ ಪವಿತ್ರ ರಾಜೇಶ್ (ಪವಿತ್ರ ಕೆ.ಬಿ.) ಅವರಿಗೆ ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಟ್ರಸ್ಟ್ ವತಿಯಿಂದ ಪ್ರತಿಷ್ಠಿತ ‘ಯೋಗ ಜ್ಯೋತಿ ಪ್ರಶಸ್ತಿ-೨೦೨೬’ ನೀಡಿ ಗೌರವಿಸಲಾಯಿತು.

ಬಲ್ಲಮಾವಟಿ ಎಡಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಹಾಗೂ ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಪವಿತ್ರ ಕೆ.ಬಿ. ಅವರು, ಕಳೆದ ೯ ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ನಿರಂತರವಾಗಿ ಉಚಿತ ಯೋಗ ತರಬೇತಿ ನೀಡುತ್ತಿದ್ದಾರೆ.

ನಿಸ್ವಾರ್ಥ ಸೇವೆಗೆ ಸಂದ ಮನ್ನಣೆ: ವೃತ್ತಿಯ ಜೊತೆಗೆ ನಿರಂತರವಾಗಿ ಯೋಗದ ಮಹತ್ವವನ್ನು ತಿಳಿಸಿಕೊಡುತ್ತಾ ಯುವ ಪೀಳಿಗೆಯಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವಲ್ಲಿ ಇವರು ಶ್ರಮಿಸುತ್ತಿದ್ದಾರೆ. ಇವರ ಶಿಸ್ತು, ಬದ್ಧತೆ ಹಾಗೂ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಗುರುತಿಸಿ ರೋಟರಿ ಸಂಸ್ಥೆಯು ಈ ಯೋಗ ಜ್ಯೋತಿ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.

ಪವಿತ್ರ ಕೆ.ಬಿ. ಅವರಿಗೆ ಪ್ರಶಸ್ತಿ ಒಲಿದಿರುವುದಕ್ಕೆ ಸ್ಥಳೀಯ ಗ್ರಾಮಸ್ಥರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.                                             ವರದಿ ; ಪ್ರಿತುನ್ ಪೂವಣ್ಣ

About The Author

error: Content is protected !!