October 21, 2026

ಕುಶಾಲನಗರದಲ್ಲಿ ‘ಲಕ್ಷ್ಮೀದೇವಿ ಟ್ರೇಡರ್ಸ್’ ಮಧುಮೇಹ ಸ್ನೇಹಿ ಅಕ್ಕಿ ಮಳಿಗೆ ಉದ್ಘಾಟನೆ

ಕುಶಾಲನಗರ: ನಗರದ ಗೋಪಾಲ್ ಸರ್ಕಲ್ ಬಳಿ ಮಧುಮೇಹ ಸ್ನೇಹಿ (ಡಯಾಬಿಟಿಕ್ ಫ್ರೆಂಡ್ಲಿ) ಅಕ್ಕಿಯ ದಾಸ್ತಾನು ಮಳಿಗೆ ‘ಲಕ್ಷ್ಮೀದೇವಿ ಟ್ರೇಡರ್ಸ್’ ಅನ್ನು ಪ್ರಸಿದ್ಧ ವೈದ್ಯರಾದ ಡಾ. ಪ್ರಾಣೇಶ್ ಅವರು ಇತ್ತೀಚೆಗೆ ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ಡಾ. ಪ್ರಾಣೇಶ್, “ಮಧುಮೇಹ ಸ್ನೇಹಿ ಅಕ್ಕಿಯು ಅತ್ಯಂತ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಹೊಂದಿದ್ದು, ಸೇವನೆಯ ನಂತರ ಸಾಮಾನ್ಯ ಅಕ್ಕಿಯಂತೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಕ್ಷಣವೇ ಏರಿಸುವುದಿಲ್ಲ. ಜೊತೆಗೆ ತೂಕ ನಿರ್ವಹಣೆ ಹಾಗೂ ಹೃದಯದ ಆರೋಗ್ಯಕ್ಕೂ ಇದು ಸಹಕಾರಿ” ಎಂದು ತಿಳಿಸಿದರು.

ಮಳಿಗೆಯ ಮಾಲೀಕರಾದ ವಿ.ಆರ್. ರಮ್ಯ ಮಾತನಾಡಿ, ಕೇವಲ ವ್ಯಾಪಾರದ ಉದ್ದೇಶವಲ್ಲದೆ, ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ವಯೋವೃದ್ಧರವರೆಗೆ ವ್ಯಾಪಕವಾಗಿ ಬಾಧಿಸುತ್ತಿರುವ ಮಧುಮೇಹ ಸಮಸ್ಯೆಗೆ ಪರಿಹಾರ ನೀಡುವ ಸಾಮಾಜಿಕ ಕಳಕಳಿಯಿಂದ ಈ ಉದ್ಯಮ ಆರಂಭಿಸಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಅಕ್ಕಿಯ ಗುಣಮಟ್ಟದ ಕುರಿತು ಗ್ರಾಹಕ ರವಿಕಿರಣ್ ತಮ್ಮ ಸ್ವಯಂ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ಉಪಾಧ್ಯಕ್ಷ ವಿ.ಎಸ್. ರಾಜಶೇಖರ ಗೌಡ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

(ವರದಿ: ಪ್ರಿತುನ್ ಪೂವಣ್ಣ)

About The Author

error: Content is protected !!