‘ದೈವ ಸಂಕಲ್ಪ – ಅರ್ಥ ಮಾಯಾ ಮೋಹಿನಿ’ ನಾಟಕದ ಮೂಲಕ ಗಮನ ಸೆಳೆದ ಸೃಜನಶೀಲ ಕಲಾವಿದ
ಭಟ್ಕಳ: ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇ ಆದ ಸೃಜನಶೀಲತೆಯ ಮೂಲಕ ಸಕ್ರಿಯರಾಗಿರುವ ಪತ್ರಕರ್ತ, ನಾಟಕಕಾರ, ನಿರ್ದೇಶಕ ಹಾಗೂ ರಂಗಕಲಾವಿದ ಭಾಸ್ಕರ್ ನಾಯ್ಕ್ ಅವರು ಈ ಬಾರಿಯ ತಾಲೂಕು ಮಟ್ಟದ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಕಲೆಯ ಮೇಲಿನ ನಿರಂತರ ಒಲವು, ನಾಟಕ ರಚನೆ ಹಾಗೂ ರಂಗಭೂಮಿಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ತಾಲೂಕು ಆಡಳಿತವು ಈ ಪ್ರಶಸ್ತಿ ನೀಡಿ ಗೌರವಿಸಿದೆ.

ರಂಗಭೂಮಿಗೆ ಹೊಸ ಮೆರುಗು: ವಿಶೇಷವಾಗಿ ತಮ್ಮ ಬರವಣಿಗೆ ಹಾಗೂ ನಿರ್ದೇಶನದ ‘ದೈವ ಸಂಕಲ್ಪ – ಅರ್ಥ ಮಾಯಾ ಮೋಹಿನಿ’ ನಾಟಕದ ಮೂಲಕ ಸ್ಥಳೀಯ ರಂಗಭೂಮಿಗೆ ಹೊಸ ಮೆರುಗು ನೀಡಿರುವ ಭಾಸ್ಕರ್ ನಾಯ್ಕ್, ಪ್ರೇಕ್ಷಕರ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದರು. ರಂಗಚಟುವಟಿಕೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಜೊತೆಗೆ ಸ್ಥಳೀಯ ಕಲಾವಿದರನ್ನು ಒಗ್ಗೂಡಿಸಿ ಪ್ರೋತ್ಸಾಹಿಸುತ್ತಿರುವುದು ಅವರ ಕಲಾ ಪಯಣದ ಪ್ರಮುಖ ಹೆಜ್ಜೆಯಾಗಿದೆ.
ಭಾಸ್ಕರ್ ನಾಯ್ಕ್ ಅವರಿಗೆ ತಾಲೂಕು ಮಟ್ಟದ ಪ್ರಶಸ್ತಿ ಒಲಿದಿರುವುದಕ್ಕೆ ತಾಲೂಕಿನ ಕಲಾವಿದರು, ಸಾಹಿತ್ಯಾಸಕ್ತರು, ಪತ್ರಕರ್ತರು ಹಾಗೂ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!