November 22, 2026

ಬೈಲೂರು ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ: ಮನೆ ಸಂಪೂರ್ಣ ಭಸ್ಮ

ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯಧನ ನೀಡಿದ ಮಾಸ್ತಪ್ಪ ನಾಯ್ಕ ಬಲಸೆ

ಭಟ್ಕಳ (ಬೈಲೂರು): ತಾಲೂಕಿನ ಬೈಲೂರು ಗ್ರಾಮದ ಮೂರುಕಟ್ಟೆ ನಿವಾಸಿ ಈಶ್ವರ ನಾಯ್ಕ ಸಸಿಹಿತ್ತಲ ಎಂಬುವವರ ಮನೆಯಲ್ಲಿ ಸೋಮವಾರ (ನ.೨) ಸಂಜೆ ಸುಮಾರು ೪ ಗಂಟೆಗೆ ಆಕಸ್ಮಿಕವಾಗಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಘಟನೆಯಿಂದಾಗಿ ಇಡೀ ಕುಟುಂಬವು ಆಸರೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪ್ರಮುಖರಾದ ಮಾಸ್ತಪ್ಪ ನಾಯ್ಕ ಬಲಸೆ ಅವರು, ಅಗ್ನಿ ಅವಘಡದಿಂದ ಭಸ್ಮವಾಗಿರುವ ಮನೆ ಹಾಗೂ ಸಂತ್ರಸ್ತ ಕುಟುಂಬದ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ಸಂತ್ರಸ್ತ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರಲ್ಲದೆ, ತಕ್ಷಣದ ನೆರವಿನೋಪಾದಿಯಲ್ಲಿ ಸಹಾಯಧನ ವಿತರಿಸಿ ಮಾನವೀಯತೆ ಮೆರೆದರು.

ಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿ ಸಾಂತ್ವನ ನೀಡಿದ ಅವರ ಸಮಯೋಚಿತ ಕಾರ್ಯಕ್ಕೆ ಗ್ರಾಮಸ್ಥರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಬೈಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಬಲಸೆ, ಪ್ರಮುಖರಾದ ನಾಗರಾಜ್ ನಾಯ್ಕ, ಚೇತನ್ ನಾಯ್ಕ, ಕೃಷ್ಣ ನಾಯ್ಕ ಹಾಗೂ ಭಾಸ್ಕರ ದೇವಾಡಿಗ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

About The Author

error: Content is protected !!