ಕುಶಾಲನಗರ (ಕೊಡಗು): ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಕುಶಾಲನಗರ ತಾಲೂಕು ಘಟಕದ ಮಾಸಿಕ ಸಭೆಯು ತಾಲೂಕು ಅಧ್ಯಕ್ಷ ಬಿ.ಜೆ. ಅಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿತು.

ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡು ಸಂಘಟನೆಯ ಬಲವರ್ಧನೆ ಹಾಗೂ ಮುಂದಿನ ಹೋರಾಟಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಇದೇ ಸಂದರ್ಭದಲ್ಲಿ ನೂತನ ಸದಸ್ಯರಾಗಿ ಉಸ್ಮಾನ್ ಮತ್ತು ಎಂ.ಕೆ. ಜಕ್ರೀಯ ಅವರನ್ನು ಸಂಘಟನೆಗೆ ಬರಮಾಡಿಕೊಳ್ಳಲಾಯಿತು.

ಅಲ್ಲದೆ, ಸಂಘಟನೆಯಲ್ಲಿ ಸುದೀರ್ಘ ಕಾಲದಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ತಾಲೂಕು ಘಟಕದ ಉಪಾಧ್ಯಕ್ಷ ಎಸ್.ಎಸ್. ಫಯಾಜ್ ಉದ್ದೀನ್ ಅವರನ್ನು ಸಭೆಯ ಸರ್ವಾನುಮತದ ಒಪ್ಪಿಗೆಯೊಂದಿಗೆ ಕೊಡಗು ಜಿಲ್ಲಾ ಘಟಕಕ್ಕೆ ಆಯ್ಕೆ ಮಾಡಲಾಯಿತು. ವರದಿ: ಪ್ರಿತುನ್ ಪೂವಣ್ಣ, ಕುಶಾಲನಗರ


More Stories
ಕೊಡಗಿನಲ್ಲಿ ನಿರಂತರ ಹುಲಿ ದಾಳಿ: 50ಕ್ಕೂ ಹೆಚ್ಚು ಜಾನುವಾರುಗಳು ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಶಾಸಕ ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಕಾಂಗ್ರೆಸ್ಗೆ ಪ್ರಮುಖರ ಸೇರ್ಪಡೆ
ಸೋಮವಾರಪೇಟೆಯಲ್ಲಿ ೭೧ನೇ ಕನ್ನಡ ರಾಜ್ಯೋತ್ಸವ: ಸಮಾಜ ಸೇವಕ ಪ್ರಾಸಿಸ್ ಡಿಸೋಜ ಸೇರಿ ಸಾಧಕರಿಗೆ ಭವ್ಯ ಸನ್ಮಾನ