November 22, 2026

ಮುರುಡೇಶ್ವರ: ಬೀನಾ ವೈದ್ಯ ಪದವಿ ಕಾಲೇಜಿಗೆ ‘ಯುನಿವರ್ಸಿಟಿ ಬ್ಲೂ’ ಗೌರವ; ಕವಿವಿ ಕ್ರಿಕೆಟ್ ತಂಡಕ್ಕೆ ಅರ್ಸಲಾನ್ ಆಯ್ಕೆ

ಅಂತಿಮ ಬಿ.ಕಾಂ ವಿದ್ಯಾರ್ಥಿ ಅರ್ಸಲಾನ್ ಆದಂ ಪೈಲಟ್ ಸಾಧನೆ; ಆಡಳಿತ ಮಂಡಳಿ ಹಾಗೂ ಕಾಲೇಜು ವತಿಯಿಂದ ಅಭಿನಂದನೆ

ಮುರುಡೇಶ್ವರ (ಉತ್ತರ ಕನ್ನಡ): ಇಲ್ಲಿನ ಪ್ರತಿಷ್ಠಿತ ಬೀನಾ ವೈದ್ಯ ಪದವಿ ಕಾಲೇಜಿನ ಅಂತಿಮ ಬಿ.ಕಾಂ (B.Com) ವಿದ್ಯಾರ್ಥಿ ಅರ್ಸಲಾನ್ ಆದಂ ಪೈಲಟ್ 2026-27ನೇ ಸಾಲಿನ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ (KUD) ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ‘ಯುನಿವರ್ಸಿಟಿ ಬ್ಲೂ’ (University Blue) ಗೌರವ ತಂದುಕೊಟ್ಟಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅರ್ಸಲಾನ್, ವಿವಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯಾರ್ಥಿಯ ಈ ವಿಶಿಷ್ಟ ಸಾಧನೆಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸಚಿವರಾದ ಮಂಕಾಳ ವೈದ್ಯ, ಸಂಸ್ಥೆಯ ಟ್ರಸ್ಟಿ ಹಾಗೂ ಆಡಳಿತ ನಿರ್ದೇಶಕಿ ಡಾ. ಪುಷ್ಪಲತಾ ಮಂಕಾಳ ವೈದ್ಯ, ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವಹೀದಾ ಬಾನು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

“ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಉನ್ನತ ಸಾಧನೆ ಮಾಡಲು ಬೀನಾ ವೈದ್ಯ ಶಿಕ್ಷಣ ಸಂಸ್ಥೆ ಸದಾ ಬದ್ಧವಾಗಿದೆ ಎಂಬುದಕ್ಕೆ ಅರ್ಸಲಾನ್ ಅವರ ಈ ಸಾಧನೆ ಉತ್ತಮ ನಿದರ್ಶನವಾಗಿದೆ” ಎಂದು ಕಾಲೇಜು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದೆ.

About The Author

error: Content is protected !!