ಸಾAಪ್ರದಾಯಿಕ ಉಡುಗೆಗಳು ನಮ್ಮ ಸಂಸ್ಕೃತಿ, ಪರಂಪರೆಯ ಪ್ರತಿಬಿಂಬ: ಪ್ರೋಸ್ಕ್ಯಾನ್ ಮಾಲೀಕರಾದ ರಿತಿಕಾ ಕಿಣಿ ಅಭಿಮತ
ಭಟ್ಕಳ (ಉತ್ತರ ಕನ್ನಡ): “ವಿದ್ಯಾರ್ಥಿಗಳಾದ ತಾವು ಇಂದು ಧರಿಸಿರುವ ಸಾಂಪ್ರದಾಯಿಕ ಉಡುಗೆಗಳು ಕೇವಲ ಬಟ್ಟೆಗಳಲ್ಲ; ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬ, ಪರಂಪರೆಯ ಸಂಕೇತ ಹಾಗೂ ನಮ್ಮ ಪೂರ್ವಜರು ನಮಗೆ ನೀಡಿರುವ ಅಮೂಲ್ಯ ಕೊಡುಗೆಗಳಾಗಿವೆ” ಎಂದು ಪ್ರೋಸ್ಕ್ಯಾನ್ ಮಾಲೀಕರಾದ ರಿತಿಕಾ ಕಿಣಿ ಅಭಿಪ್ರಾಯಪಟ್ಟರು.

ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ಉಡುಗೆ ಹಾಗೂ ಗುಂಪು ನೃತ್ಯ ಸ್ಪರ್ಧೆ ನೃತ್ಯಾಂಜಲಿ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮತ್ತೋರ್ವ ನಿರ್ಣಾಯಕರಾಗಿ ಆಗಮಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ನ ರೋಟರಿ ವೊಕೇಶನಲ್ ಟ್ರೈನಿಂಗ್ ಸೆಂಟರ್‌ನ ತರಬೇತುದಾರರಾದ ರೇಷ್ಮಾ ನಾಯ್ಕ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶಾನಭಾಗ ವಹಿಸಿದ್ದರು. ಭಟ್ಕಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಬಳಿಕ ನಡೆದ ಗುಂಪು ನೃತ್ಯ ಸ್ಪರ್ಧೆಯಲ್ಲಿ ಸಲ್ಮಾನ್ ಮತ್ತು ನಂದಿತಾ ಕಾಮತ್ ನಿರ್ಣಾಯಕರಾಗಿ ಭಾಗವಹಿಸಿದ್ದರು.
ಸ್ಪರ್ಧಾ ವಿಜೇತರ ವಿವರ:
ಸಾಂಪ್ರದಾಯಿಕ ಉಡುಗೆ ಸ್ಪರ್ಧೆ (ಪ್ರಥಮ ಸ್ಥಾನ): ದ್ವಿತೀಯ ಪಿಯುಸಿ (ವಿದ್ಯಾರ್ಥಿಗಳ ವಿಭಾಗ): ಕರಣ್ ಸೋಮಶೇಖರ ನಾಯ್ಕ ದ್ವಿತೀಯ ಪಿಯುಸಿ (ವಿದ್ಯಾರ್ಥಿನಿಯರ ವಿಭಾಗ): ಸಿಂಧು ಶಿವಾಜಿ ಆರೇರ ಪ್ರಥಮ ಪಿಯುಸಿ (ವಿದ್ಯಾರ್ಥಿಗಳ ವಿಭಾಗ): ಸಂಜೀವ ಗೊಂಡ ಪ್ರಥಮ ಪಿಯುಸಿ (ವಿದ್ಯಾರ್ಥಿನಿಯರ ವಿಭಾಗ): ತನ್ಮಯಿ ಕಿಣಿ
ಗುಂಪು ನೃತ್ಯ ಸ್ಪರ್ಧೆ:
ವಿದ್ಯಾರ್ಥಿಗಳ ವಿಭಾಗ: ದ್ವಿತೀಯ ಪಿಯುಸಿ ವಿಜ್ಞಾನ ಬಿ ವಿಭಾಗ (ಪ್ರಥಮ), ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ (ದ್ವಿತೀಯ), ಪ್ರಥಮ ಪಿಯುಸಿ ವಾಣಿಜ್ಯ ವಿಭಾಗ (ತೃತೀಯ). ವಿದ್ಯಾರ್ಥಿನಿಯರ ವಿಭಾಗ: ದ್ವಿತೀಯ ಪಿಯುಸಿ ವಾಣಿಜ್ಯ ಎ ವಿಭಾಗ (ಪ್ರಥಮ), ಪ್ರಥಮ ಪಿಯುಸಿ ವಿಜ್ಞಾನ ಎ ವಿಭಾಗ (ದ್ವಿತೀಯ), ಪ್ರಥಮ ಪಿಯುಸಿ ವಿಜ್ಞಾನ ಬಿ ವಿಭಾಗ (ತೃತೀಯ).

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!