November 23, 2026

ಅಗಲಿದ ಮಾಜಿ ಸೈನಿಕ ವಾಮನ ನಾಯ್ಕ ಅವರಿಗೆ ಸೇನಾ ಗೌರವದೊಂದಿಗೆ ಅಂತಿಮ ನಮನ

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ; ಮೃತರ ಧರ್ಮಪತ್ನಿಗೆ ರಾಷ್ಟ್ರಧ್ವಜ ಹಸ್ತಾಂತರ

ಹೊನ್ನಾವರ (ಉತ್ತರ ಕನ್ನಡ): ನಿಧನರಾದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಹೊನ್ನಾವರ ತಾಲೂಕು ಘಟಕದ ಗೌರವಾಧ್ಯಕ್ಷ, ಮಾಜಿ ಸೈನಿಕ ದಿವಂಗತ ವಾಮನ ನಾಯ್ಕ ಮಂಕಿ ಅವರಿಗೆ ಸಂಘದ ವತಿಯಿಂದ ಸೇನಾ ಗೌರವದೊಂದಿಗೆ ಭಾವಪೂರ್ಣ ಅಂತಿಮ ನಮನ ಸಲ್ಲಿಸಲಾಯಿತು.

ಹೊನ್ನಾವರ ತಾಲೂಕಿನ ಎಲ್ಲಾ ಮಾಜಿ ಸೈನಿಕರು ಒಗ್ಗೂಡಿ ಮೃತರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ದೇಶಕ್ಕಾಗಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತ, ಸಂಘದ ವತಿಯಿಂದ ಅವರ ಧರ್ಮಪತ್ನಿಯವರಿಗೆ ಗೌರವಪೂರ್ವಕವಾಗಿ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಯಿತು.

ಸಂಘದಿಂದ ಸಂತಾಪ: “ಸಂಘದ ಪ್ರತಿಯೊಂದು ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿ ಭಾಗವಹಿಸುತ್ತ, ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದ ವಾಮನ ನಾಯ್ಕ ಅವರ ಅಗಲಿಕೆ ಮಾಜಿ ಸೈನಿಕರ ಸಂಘಕ್ಕೆ ಹಾಗೂ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ದಿವ್ಯಾತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ” ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹೊನ್ನಾವರ ಘಟಕದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

About The Author

error: Content is protected !!