March 2, 2026

ಗಾಂಧಿ ಸ್ಮೃತಿ ಮತ್ತು ಜನ ಜಾಗೃತಿ ಸಮಾವೇಶ

ಹೊನ್ನಾವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉತ್ತರ ಕನ್ನಡ ಜಿಲ್ಲೆ ವತಿಯಿಂದ, ಹೊನ್ನಾವರ ತಾಲೂಕಿನ ಮೂಡಗಣಪತಿ ಸಭಾಭವನದಲ್ಲಿ ಗಾಂಧಿ ಸ್ಮೃತಿ ಮತ್ತು ಜನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಹೊನ್ನಾವರ ತಹಶೀಲ್ದಾರ್ ಪ್ರವೀಣ್ ಕರಾಂಡೆ ಅವರು ಜ್ಯೋತಿ ಬೆಳಗಿ ತೆಂಗಿನ ಸಿಂಗಾರ ಅರಳಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರ ಮತ್ತು ಮಹಾತ್ಮಾ ಗಾಂಧಿಯವರ ಭಾವ ಚಿತ್ರಕ್ಕೆ ಗಣ್ಯರೆಲ್ಲ ಪುಷ್ಪಾರ್ಚನೆ ಮಾಡಿದರು. ಕುಡಿತ ಬಿಟ್ಟು ಹೊಸ ಜೀವನ ಸಾಗಿಸುತ್ತಿರುವ ನವಜೀವನ ಸಮಿತಿ ಸದಸ್ಯರುಗಳಿಗೆ, ವೇದಿಕೆಯ ಮೇಲಿದ್ದ ಗಣ್ಯರು ಪುಷ್ಪ ನೀಡಿ ಗೌರವಿಸಿದರು. ಯೋಜನೆಯ ವಿವಿಧ ಜನುಪಯೋಗಿ ಕಾರ್ಯಕ್ರಮಗಳಿಗೆ ಸಂಬAಧಿಸಿದ ಪ್ರಮಾಣ ಪತ್ರ, ವೀಲ್ ಚೇರ್ ಇತ್ಯಾದಿ ಸಲಕರಣೆಗಳನ್ನು ಅರ್ಹ ಪಲಾನುಭವಿಗಳಿಗೆ ವಿತರಿಸಲಾಯಿತು. ಜನಜಾಗೃತಿ ವೇದಿಕೆಯ ಮದ್ಯಪಾನ ವಿರೋಧಿ ಕಾರ್ಯಕ್ರಮಗಳಿಗೆ ಸರಕಾರದ ಸಂಬAಧಿಸಿದ ಇಲಾಖೆಗಳು ಸ್ಪಂದಿಸಬೇಕೆAಬ ಹಕ್ಕೋತ್ತಾಯದ ಠರಾವು ಓದಿ ತಿಳಿಸಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೆತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ ” ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮೇಲೆ ಬಂದ ಆರೋಪ ತಮಗೆಲ್ಲ ಗೊತ್ತಿದೆ. ಆ ಸಂದರ್ಭದಲ್ಲಿ ನಮ್ಮ ಭಾರತೀಯ ಜನತಾ ಪಾರ್ಟಿಯ ಎಲ್ಲ ಶಾಸಕರು ಬೆಂಗಳೂರಿAದ ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪೂಜ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಾನೂ ಸಹ ನಮ್ಮ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿನ ಜನರನ್ನು ಸುಮಾರು ಅರವತ್ತು ವಾಹನಗಳಲ್ಲಿ ಕರೆದುಕೊಂಡು ಧರ್ಮಸ್ಥಳಕ್ಕೆ ಹೋಗಿ ಪೂಜ್ಯರ ಭೇಟಿಯಾಗಿ, ಧರ್ಮಕ್ಕೆ ಜಯ ಸಿಗುವ ವಿಶ್ವಾಸ ವ್ಯಕ್ತಪಡಿಸಿ ಬಂದಿದ್ದೇನೆ” ಎಂದರು.

ಹಿರಿಯ ಪತ್ರಕರ್ತ ಜಿ.ಯು ಭಟ್ ಮಾತನಾಡಿ “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನುಪಯುಕ್ತ ಕಾರ್ಯಕ್ರಮಗಳ ಕುರಿತು” ವಿವರಿಸಿದರು.

ಜನ ಜಾಗೃತಿ ವೇದಿಕೆಯ ಎಂ.ಆರ್. ನಾಯ್ಕ್, ತಾವೇ ರಚಿಸಿ ಹಾಡಿದ ದುಷ್ಚಟ ನಿರ್ಮೂಲನೆ ಕುರಿತಾದ ಗೀತೆ ಎಲ್ಲರ ಗಮನ ಸೆಳೆಯಿತು.

ಸಭಾ ಅಧ್ಯಕ್ಷತೆ ವಹಿಸಿದ್ದ, ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ನಾಯ್ಕ್ ಮಾತನಾಡಿ “ಎಲ್ಲಿ ಧರ್ಮ ಇರುತ್ತದೆಯೋ ಅಲ್ಲಿ ಚಮತ್ಕಾರ ನಡೆಯುತ್ತದೆ. ಈ ಹಿಂದೆ ಮದ್ಯವರ್ಜನಾ ಶಿಬಿರ ಕಾರ್ಯಕ್ರಮವೊಂದರ ಉದ್ಘಾಟನೆ ಸಂದರ್ಭದಲ್ಲಿ ಜ್ಯೋತಿ ತಾನಾಗಿಯೇ ಹೊತ್ತಿಕೊಂಡ ಉದಾಹರಣೆಯಿದೆ” ಎಂದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸುರೇಶ ಹೊನ್ನಾವರ, ಜನಜಾಗೃತಿ ವೇದಿಕೆಯ ಶಿವರಾಜ್ ಮೇಸ್ತ, ಗಂಗಾಧರ್ ಭಟ್, ಸತೀಶ್ ಶೇಟ್, ಎಸ್.ಜಿ. ಭಟ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ನಿರ್ದೇಶಕ ಮಹೇಶ್ ಎಂ.ಡಿ ಸ್ವಾಗತಿಸಿದರು. ತಾಲೂಕಾ ಯೋಜನಾಧಿಕಾರಿ ಪ್ರಭಾಕರ್ ವಂದಿಸಿದರು. ಯೋಜನೆಯ ಶಿವರಾಜ್ ಆಚಾರ್ಯ ಮತ್ತು ಮಮತಾ ಸಭಾ ಕಾರ್ಯಕ್ರಮ ನಿರ್ವಹಿಸಿದರು.

About The Author

error: Content is protected !!