March 2, 2026

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತಪ್ಪಿಸಲು ಮೀಸಲಾತಿ ಮಾಡಿದರೆ ಉಗ್ರ ಹೋರಾಟ ನಡೆಸುದಾಗಿ ಬಿಜೆಪಿಯಿಂದ ಎಚ್ಚರಿಕೆ.

ಹೊನ್ನಾವರ: ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಏರಲು ವಾಮಮಾರ್ಗ ಬಳಸಿ ಬಿಜೆಪಿ ಅಭ್ಯರ್ಥಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತಪ್ಪಿಸಲು ಮೀಸಲಾತಿ ಮಾಡಿದರೆ ಉಗ್ರ ಹೋರಾಟ ನಡೆಸುದಾಗಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯದರ್ಶಿ ಸುಬ್ರಾಯ ನಾಯ್ಕ ಎಚ್ಚರಿಸಿದರು.


ಮಂಕಿಯ ಶ್ರೀ ಹನುಮಂತ ದೇವಸ್ಥಾನ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಇರುವಾಗ ಮಾಜಿ ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ ನಾಯ್ಕ ಮಂಕಿ ಅಭಿವೃದ್ದಿಗಾಗಿ ಪ.ಪಂ. ಮೇಲ್ದರ್ಜೆಗೆ ಏರಿಸಲು ಶಿಪಾರಸ್ಸು ಮಾಡಿರುದರಿಂದ ಪಟ್ಟಣ ಪಂಚಾಯಿತಿಯಾಗಿ ರಚನೆಯಾಯಿತು. ನಾಲ್ಕು ವರ್ಷದ ನಂತರ ರಾಜ್ಯದ ಕಾಂಗ್ರೇಸ್ ಸರ್ಕಾರ ಚುನಾವಣೆ ಘೋಷಿಸಿ, ಬಿಜೆಪಿ ಮುಖಂಡರನ್ನು ಹಿನ್ನಡೆ ಮಾಡಲು ಮೀಸಲಾತಿಯ ಮೂಲಕ ಹಲವರ ಸ್ಪರ್ಧೆಗೆ ಸಮಸ್ಯೆ ಉಂಟು ಮಾಡಿದರು.


ಚುನಾವಣೆ ನಡೆದ 18 ವಾರ್ಡನಲ್ಲಿ 17 ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸಿ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮ ವಹಿಸಿ ಮತದಾರರ ವಿಶ್ವಾಸಗಳಿಸಿ 12 ಸ್ಥಾನದಲ್ಲಿ ಜಯಶಾಲಿಯಾಗಿದ್ದೇವು. ಮಂಕಿ ಜನತೆ ಸ್ಪಷ್ಟ ಬಹುಮತ ನೀಡುವ ಮೂಲಕ ಆಡಳಿತ ನಡೆಸಲು ಆರ್ಶಿವದಿಸಿದರೂ, ಕಾಂಗ್ರೇಸ್ ಮುಖಂಡರು ಸರ್ಕಾರದ ಮೂಲಕ ಪ್ರಭಾವ ಬೀರಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಗೆದ್ದ ಬಿಜೆಪಿ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಸಿ ಮೀಸಲಾತಿ ಮಾಡುವ ಹನ್ನಾರ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರು ಬೆಡ್ ಮಂಕಿ ಆಸ್ಪತ್ರೆ 22 ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿ ನವೀಕರಣಗೊಂಡು ಆರು ತಿಂಗಳು ಕಳೆದರೂ, ಇನ್ನು ಜನಸೇವೆಗೆ ಅನೂಕೂಲ ಕಲ್ಪಿಸಿಲ್ಲ. ಒಂದು ತಿಂಗಳೊಳಗೆ ಆಸ್ಪತ್ರೆಯ ಉದ್ಘಾಟನೆ ನಡೆಸದೇ ಹೊದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಬಿಜೆಪಿ ಮಂಡಲದ ಕಾರ್ಯದರ್ಶಿ ಗಣಪತಿ ಗೌಡ ಚಿತ್ತಾರ ಮಾತನಾಡಿ, ಮಂಕಿ ಘಟಕದ ಪರವಾಗಿ ಹ್ರತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಪಕ್ಷದ ಎಲ್ಲಾ ಕಾರ್ಯಕರ್ತರು ಶ್ರಮಿಸಿದ್ದಾರೆ. ಸಂಸದ ಕಾಗೇರಿ, ಹಾಲಪ್ಪ, ರೂಪಾಲಿ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಮಂಡಲದ ಅಧ್ಯಕ್ಷ ಮಂಜುನಾಥ ನಾಯ್ಕ, ಮಂಕಿ ಘಟಕದ ಕಾರ್ಯಕರ್ತರು ಶ್ರಮಿಸಿದ್ದಾರೆ. ಎಲ್ಲಾ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮಾಜಿ ಜಿ.ಪಂ.ಸದಸ್ಯ ದೀಪಕ ನಾಯ್ಕ ಮಾತನಾಡಿ, 17 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿತ್ತು. ಅದರಲ್ಲಿ 12 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಎಲ್ಲಾ ವಾರ್ಡ್ ಗಳಲ್ಲಿ ಯಾವುದೇ ಗೊಂದಲವಿಲ್ಲದೇ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎಂದರು.
ಈ ಸಂದರ್ಭದಲ್ಲಿ ಮಂಕಿ ಪ.ಪಂ. ಆಯ್ಕೆಯಾದ ಬಿಜೆಪಿ ಪಕ್ಷದ ಸದಸ್ಯರು, ಮುಖಂಡರು ಕಾರ್ಯಕರ್ತರು ಇದ್ದರು.
…….
ವಿಜಯನಗರದ ಅರಸರ ಕಾಲದಲ್ಲಿ ಮಾಣಿಕ್ಯಪುರ ಎಂದು ಹೆಸರು ಗಳಿಸಿದ್ದ ಮಂಕಿ ಊರಿಗೆ ಮಾಣಿಕ್ಯಪುರ ಎಂದು ಮರುನಾಮಕರಣ ಮಾಡಲು ಅಜೆಂಡಾ ಇಟ್ಟು ರಾಜ್ಯ ಸರ್ಕಾರಕ್ಕೆ ಶಿಪಾರಸ್ಸು ಮಾಡುತ್ತೇವೆ. ಅಭಿವೃದ್ದಿಯಲ್ಲಿ ಬಿಜೆಪಿ ರಾಜಕಾರಣ ಎಂದಿಗೂ ಮಾಡುವುದಿಲ್ಲ. ಸರ್ಕಾರದಿಂದ ಹೆಚ್ಚಿನ ಸೌಲಭ್ಯದ ಮೂಲಕ ಅಭಿವೃದ್ದಿಗೆ ಒತ್ತು ನೀಡುತ್ತೇವೆ
ಸುಬ್ರಾಯ ನಾಯ್ಕ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯದರ್ಶಿ

About The Author

error: Content is protected !!