ಭಟ್ಕಳ: ಭಟ್ಕಳ ವೆಂಕಟಾಪುರದ ಕೇನರಾ ಬ್ಯಾಂಕ್ ಖಾತೆದಾರರೊಬ್ಬರಿಗೆ ಆನ್‌ಲೈನ್ ವಂಚನೆಯಿಂದ ₹1.55 ಲಕ್ಷ ಹಣ ನಷ್ಟವಾದ ಘಟನೆ ವರದಿಯಾಗಿದೆ.

ಹೆಬಳೆ ಗಾಂಧಿನಗರ,ನಿವಾಸಿ
ತುಳಸಿದಾಸ ತಂದೆ ಮಾಸ್ತಿ ಮೊಗೇರ ಅವರು ಭಟ್ಕಳ ವೆಂಕಟಾಪುರದಲ್ಲಿರುವ ಕೇನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು,ಯಾರೋ ಅಪರಿಚಿತ ಆರೋಪಿತರು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಅವರ ಖಾತೆಯಿಂದ ಒಟ್ಟು ₹1,55,000/- ಹಣವನ್ನು ಅಕ್ರಮವಾಗಿ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ಖಾತೆಯಲ್ಲಿ ಹಣ ಇಲ್ಲದಿರುವುದು ಗಮನಕ್ಕೆ ಬಂದ ತಕ್ಷಣ ಪೀಡಿತರು ಬ್ಯಾಂಕ್ ಹಾಗೂ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

More Stories
ಮಾರುಕೇರಿ ಹೂತ್ಕಳದ ಧನ್ವಂತರಿ ದೇವಾಲಯದಲ್ಲಿ ಜುಲೈ 25 ರಂದು ‘ಲಕ್ಷ ತುಳಸಿ ಅರ್ಚನೆ’ ಹಾಗೂ ‘ಸ್ವರ್ಣ ಪಾದುಕಾ ಭಿಕ್ಷೆ’
ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ‘ಕೃಷ್ಣ ಯಜುರ್ವೇದ ಸ್ವಾಹಾಕಾರ’ ಧಾರ್ಮಿಕ ಮಹೋತ್ಸವ ಸಂಪನ್ನ
ಸಾಧಕ ಭಟ್ಕಳ ತಾಲೂಕು ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಆಟೋ ಚಾಲಕರ-ಮಾಲಕರ ಸಂಘದಿಂದ ಸನ್ಮಾನ