ಭಟ್ಕಳ: ನ್ಯಾಯಾಲಯದಿಂದ ಹೊರಡಿಸಿದ ದಸ್ತಗಿರ್ ವಾರೆಂಟ್ ಜ್ಯಾರಿ ಮಾಡಲು ತೆರಳಿದ್ದ ಕೋರ್ಟ್ ಬೇಲಿಫ್ ಒಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ದೂಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅದಿತ್ ಮೊಹಮ್ಮದ್ ಇರ್ಫಾನ್ ಅಬುಬಕರ್ ಹಾಜಿಅಮೀನ್ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನ್ಯಾಯಾಲಯದ ಬೇಲಿಫ್ ಆಗಿರುವ ಗಣಪತಿ ತಂದೆ ಹನುಮಂತ ನಾಯ್ಕ ಅವರು ನೀಡಿದ ದೂರಿನ ಪ್ರಕಾರ, ಭಟ್ಕಳ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಿಂದ ಹೊರಡಿಸಲಾದ ವಾರೆಂಟ್ ಜ್ಯಾರಿ ಮಾಡಲು ಆರೋಪಿಯ ಮನೆಗೆ ತೆರಳಿದಾಗ ಈ ಘಟನೆ ನಡೆದಿದೆ. ಈ ವೇಳೆ ಆರೋಪಿಯ ಸಹೋದರ ಸುಫಿಯಾನ್ ಕೂಡ ಸ್ಥಳದಲ್ಲಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಬೇಲಿಫ್ ಅವರೊಂದಿಗೆ ಇದ್ದ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್, ಭಟ್ಕಳ ಸಂಸ್ಥೆಯ ಸಿಬ್ಬಂದಿಗಳಾದ ರೋಹಿತ್ (ತಂದೆ ದತ್ತಾತ್ರೇಯ ಶೆಟ್ಟ) ಹಾಗೂ ಗಣೇಶ (ತಂದೆ ಹನುಮಂತ ನಾಯ್ಕ) ಇವರಿಗೂ ಅವಾಚ್ಯ ನಿಂದನೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮುರ್ಡೇಶ್ವರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ