ಭಟ್ಕಳ ;ತಾಲೂಕಿನ ಬೆಳಕೆಯ ಮಯೂರ ದಾಬಾ ಎದುರು ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಹಿಂಬದಿ ಸವಾರನಾಗಿದ್ದ ಕುಂದಾಪುರ ತಾಲೂಕಿನ 11ನೇ ಉಳ್ಳೂರು ನಿವಾಸಿ ಮಹಾಬಲೇಶ್ವರ (ತಂದೆ: ವಾಸುದೇವ ಹೆಬ್ಬಾರ್) ಗಾಯಗೊಂಡಿದ್ದಾರೆ.
ಗ್ರಾಮೀಣ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಶ್ರೀಪತಿ (ತಂದೆ: ನಾರಾಯಣ ಹೆಬ್ಬಾರ್) ಅವರ ಬೈಕ್‌ನಲ್ಲಿ ಭಟ್ಕಳದಿಂದ ಕುಂದಾಪುರದ ಕಡೆ ತೆರಳುತ್ತಿದ್ದ ವೇಳೆ, ಬೆಳಕೆಯ ಮಯೂರ ದಾಬಾ ಎದುರು ನಾಯಿ ಏಕಾಏಕಿ ಅಡ್ಡ ಬಂದಿತ್ತು. ಇದರಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು, ಮಹಾಬಲೇಶ್ವರ ಅವರಿಗೆ ಬಲಗಾಲಿನ ಜಾಯಿಂಟ್ ಸಮೀಪ ಗಾಯವಾಗಿದೆ.
ಘಟನೆಯ ಸಂಬಂಧ ಗ್ರಾಮೀಣ ಠಾಣೆ ಪೊಲೀಸರು ಬೈಕ್ ಸವಾರ ಶ್ರೀಪತಿ ಹೆಬ್ಬಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ