March 2, 2026

ಮಾವಿನಕಟ್ಟಾ–ಕೋಕ್ತಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ:ಯುವಕ ಸಾವು | ಇಬ್ಬರಿಗೆ ಗಾಯ

ಭಟ್ಕಳ: ತಾಲ್ಲೂಕಿನ ಮಾವಿನಕಟ್ಟಾ–ಕೋಕ್ತಿ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಕೋಕ್ತಿ ನಿವಾಸಿ ನಾಗರಾಜ (30), ತಂದೆ ವೆಂಕಟ್ರಮಣ ನಾಯ್ಕ ಮೃತರು. ಅಪಘಾತದಲ್ಲಿ ತಲೆಗೆ ಗಂಭೀರ ಒಳಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಭಟ್ಕಳದಿಂದ ಮುರ್ಡೇಶ್ವರದತ್ತ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿಕೊಂಡು ಬಂದ ಸಚಿನ್, ತಂದೆ ಮುರಗಾ (ಆದಿಕರ್ನಾಟಕ) ಎಂಬವರ ವಾಹನ, ನಾಗರಾಜರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತರ ಜೊತೆಗೆ ಹಿಂಬದಿ ಸವಾರನಾಗಿದ್ದ ಮಂಜುನಾಥ ಅವರಿಗೆ ಬಾಯಿ ಹಾಗೂ ಕೈಕಾಲುಗಳಿಗೆ ಗಾಯಗಳಾಗಿವೆ. ಅಪಘಾತಕ್ಕೆ ಕಾರಣವಾದ ಬೈಕ್ ಸವಾರನಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಮುರ್ಡೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!