ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘದಿಂದ ಬೃಹತ್ ಪ್ರತಿಭಟನೆ.. ತಮಟೆ ಚಳುವಳಿ..
ಕೃಷ್ಣರಾಜಪೇಟೆ ತಾಲೂಕಿನ ಕಂದಾಯ ಇಲಾಖೆಯ, ಭೂ ಮಂಜೂರಾತಿ ಶಾಖೆಯಲ್ಲಿ ಶಿರಸ್ತೆದಾರರಾಗಿ ಕಳೆದ ಮೂರು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಅಸ್ಲಾಂ ಭಾಷಾ ಅವರನ್ನು ಏಕಾಏಕಿ ವರ್ಗಾಯಿಸಿ ಅವರ ಸ್ಥಾನಕ್ಕೆ ಬಂದಿರುವ ರೈತ ವಿರೋಧಿ ಭ್ರಷ್ಟ ಅಧಿಕಾರಿ ರವಿಯವರ ವರ್ಗಾವಣೆ ಆದೇಶವನ್ನು ವಿರೋಧಿಸಿ ಎಂದು ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘದ ಕಾರ್ಯಕರ್ತರು ತಾಲೂಕು ಆಡಳಿತ ಕಾರ್ಯ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿ, ತಮಟೆ ಚಳುವಳಿ ಮಾಡಿ ದಕ್ಷ ಅಧಿಕಾರಿಯ ವರ್ಗಾವಣೆಯನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿ, ಸ್ಥಳಕ್ಕೆ ಭೇಟಿ ನೀಡಿದ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಕೆ ಆರ್ ಪೇಟೆ ತಾಲ್ಲೂಕು ಕಚೇರಿಯಲ್ಲಿ ರೆಬೆನ್ಯೂ ಚಿರತೆದರಾಗಿ ಕರ್ತವ ನಿರ್ವಹಿಸುತ್ತಿದ್ದ ರವಿಯವರು 460ಕ್ಕೂ ಹೆಚ್ಚು ಕಡತಗಳನ್ನು ವಿಲೇವಾರಿ ಮಾಡದೆ ಲಂಚದ ಹಣಕ್ಕೆ ಒತ್ತಾಯಿಸಿ ಬಾಕಿ ಇಟ್ಟುಕೊಂಡಿದ್ದು ಕರ್ತವ್ಯದಿಂದ ಅಮಾನತುಗೊಂಡಿದ್ದರು. ರಾಜಕೀಯ ಪ್ರಭಾವ ಬೆಳೆಸಿ ಅಮಾನತ್ತು ಆದೇಶವನ್ನು ತೆರವು ಮಾಡಿಸಿಕೊಂಡು ಮತ್ತೆ ಕೆ.ಆರ್.ಪೇಟೆಗೆ ವರ್ಗಾವಣೆಯಾಗಿ ಬಂದಿದ್ದ ರವಿಯವರನ್ನು ರಾಜ್ಯ ಸರ್ಕಾರವು ಮತ್ತೆ ವರ್ಗಾವಣೆ ಮಾಡಿತ್ತು. ಕಳೆದ ಮೂರು ತಿಂಗಳ ಹಿಂದಷ್ಟೇ ಕೆ ಆರ್ ಪೇಟೆಗೆ ರೆವಿನ್ಯೂ ಷರಿಸ್ತೇದರಾಗಿ ರವಿ ಅವರ ಸ್ಥಳಕ್ಕೆ ವರ್ಗಾವಣೆಗೊಂಡು ನಿಯತ್ತಿಯಾಗಿದ್ದ ಅಸ್ಲಾಂ ಭಾಷಾ ಅವರು ಶೀಘ್ರ ಕಡತಗಳ ವಿಲೆವಾರಿಗೆ ಕ್ರಮ ಕೈಗೊಂಡು, ರೈತ ಪರವಾಗಿ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಮತ್ತೆ ತಾನು ಅಮಾನತ್ತುಗೊಂಡಿದ್ದ ಸ್ಥಳಕ್ಕೆ ರಾಜಕೀಯ ಪ್ರಭಾವ ಬಳಸಿ ಮತ್ತೆ ವರ್ಗಾವಣೆಯಾಗಿ ಬಂದಿರುವ ರವಿ ಅವರು ಕಡತಗಳನ್ನು ತಿದ್ದುಪಡಿ ಮಾಡಿ, ಲಂಚದ ಹಣ ನೀಡದ ರೈತರಿಗೆ ತೊಂದರೆ ನೀಡಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಯಾವುದೇ ಕಾರಣಕ್ಕೂ ರವಿಯವರು ಕೆ. ಆರ್.ಪೇಟೆಯಲ್ಲಿ ಕೆಲಸ ಮಾಡಲು ನಾವು ಬಿಡುವುದಿಲ್ಲ ಕೂಡಲೇ ರಾಜ್ಯ ಸರ್ಕಾರವು ದಕ್ಷ ಅಧಿಕಾರಿ ಅಸ್ಲಾಂ ಭಾಷಾ ಅವರ ವರ್ಗಾವಣೆಯನ್ನು ರದ್ದು ಪಡಿಸಿ ಕೆ.ಆರ್.ಪೇಟೆಯಲ್ಲಿಯೇ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವ ಜೊತೆಗೆ ರವಿಯವರನ್ನು ಹಿಂದಕ್ಕೆ ಕಳಿಸಲು ಗೋಬ್ಯಾಕ್ ಚಳುವಳಿ ನಡೆಸಬೇಕಾಗುತ್ತದೆ ಎಂದು ರೈತ ನಾಯಕ ಮುದುಗೆರೆ ರಾಜೇಗೌಡ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪುರಸಭೆಯ ಹಿರಿಯ ಸದಸ್ಯ ಡಿ.ಪ್ರೇಮ್ ಕುಮಾರ್ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ನಾಟನಹಳ್ಳಿ ಸೋಮರಾಜು ಜಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಮಾಂಬಳ್ಳಿ ಜಯರಾಮ್, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಪುಟ್ಟೇಗೌಡ ಮಾಜಿ ಅಧ್ಯಕ್ಷ ಮರುವನಹಳ್ಳಿ ಶಂಕರ್, ಬೂಕನಕೆರೆ ನಾಗರಾಜು, ದಲಿತ ಮುಖಂಡರಾದ ಮುದುಗೆರೆ ಮಹೇಂದ್ರ ಹರಿಹರಪುರ ನರಸಿಂಹ, ಜೈನಹಳ್ಳಿ ಹರೀಶ್, ನಾಟನಹಳ್ಳಿ ರಮೇಶ್, ಟಿ.ವೈ. ಆನಂದ್, ಅಗ್ರಹಾರ ಬಾಚಹಳ್ಳಿ ಜಗಧೀಶ್, ಆಟೋ ಜಾವಿದ್, ಸೈಯದ್ ಜಮೀಲ್, ಅಜಮತುಲ್ಲಾ ಶರೀಫ್, ಸಲ್ಲೂ, ನವೀದ್ ಅಹಮದ್, ಮುರುಕನಹಳ್ಳಿ ಜಾವಿದ್ ಸೇರಿದಂತೆ ನೂರಾರು ಜನರು ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಕಾರ್ಯನಿಮಿತ್ತ ಇಂದು ಕೆ.ಆರ್. ಪೇಟೆಗೆ ಆಗಮಿಸಿದ್ದ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಹಶೀಲ್ದಾರ್ ಅಶೋಕ್ ಅವರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ಕಾರ್ಯದಿಂದ ಮನವಿ ಸ್ವೀಕರಿಸಿ ರವಿಯವರ ವರ್ಗಾವಣೆಯನ್ನು ರದ್ದು ಪಡಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಧರಣಿ ಸತ್ಯಾಗ್ರಹವನ್ನು ವಾಪಸ್ ಪಡೆದರು. ಕೆ ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಸುಮಾರಾಣಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಸೊಳ್ಳೇಪುರ ಹಾಲು ಉತ್ಪಾದಕ ಸಹಕಾರ ಸಂಘ ಕಾಂಗ್ರೆಸ್ ವಷಕ್ಕೆ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ