ಭಟ್ಕಳ: ಜಗತ್ತ ಪ್ರಸಿದ್ಧ ಮುರುಡೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮುಂಜಾನೆ ಇಂದಲೇ ಸಾವಿರಾರು ಭಕ್ತರು ದಂಡು ಹರಿದು ಬಂದು ಶಿವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗಿನಿಂದಲೇ ದೇವಾಲಯ ಪ್ರದೇಶ ಭಕ್ತರಿಂದ ಕಿಕ್ಕಿರಿದು ಭಕ್ತಿಭಾವದ ವಾತಾವರಣ ಕಂಗೊಳಿಸಿತು.
ಜಿಲ್ಲಾಡಳಿತ ವತಿಯಿಂದ ರಾತ್ರಿ ಆಯೋಜಿಸಲಾದ ಮಹಾಶಿವರಾತ್ರಿ ಜಾಗರಣೆ ಉತ್ಸವದಲ್ಲಿ ಸಹ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿಗೀತೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಲ್ಲೀನರಾದರು. ಜಾಗರಣೆಯ ಸಂಭ್ರಮದಿಂದ ದೇವಸ್ಥಾನ ಪ್ರದೇಶ ರಾತ್ರಿಯಿಡೀ ಜಾಜ್ವಲ್ಯಮಾನವಾಗಿತ್ತು.
ಇದನ್ನೊಳಗೊಂಡು ಜನಸಂದಣಿ ನಡುವೆ ಬೆಳಗ್ಗೆ ಹಾಗೂ ರಾತ್ರಿ ವೇಳೆ ಕಳೆದುಕೊಂಡಿದ್ದ ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಪೊಲೀಸರು ಶೀಘ್ರ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದರು.
ಸಿಪಿಐ ಜಗದೀಶ ಹಂಚನಾಳ, ಪಿಎಸೈ ಹನುಮಂತ ಬಿರಾದಾರ ಹಾಗೂ ಸಿಬ್ಬಂದಿಗಳು ತ್ವರಿತವಾಗಿ ಕ್ರಮ ಕೈಗೊಂಡು ಮಾನವೀಯತೆ ಮೆರೆದರು. ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
About The Author


More Stories
ಮುರ್ಡೇಶ್ವರದಲ್ಲಿ ಭವ್ಯ ಬಿಲ್ವಾರ್ಚನೆ: 2 ಸಾವಿರಕ್ಕೂ ಅಧಿಕ ಭಕ್ತರು ಭಾಗಿ
ಭಟ್ಕಳದಲ್ಲಿ ಮನೆಯ ಶೆಡ್ನಿಂದ ಹೋಂಡಾ ಸ್ಕೂಟಿ ಕಳವು
ದೇಶಸೇವೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ: ಮುರ್ಡೇಶ್ವರ ಶಾಖೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ