April 16, 2026

ದ್ವಿತೀಯ ಪಿಯುಸಿ ಫಲಿತಾಂಶ: ಸಿದ್ಧಾರ್ಥ ಕಾಲೇಜು 100% ಸಾಧನೆ

ಭಟ್ಕಳ: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಸಿದ್ಧಾರ್ಥ ಪದವಿಪೂರ್ವ ಕಾಲೇಜು, ಭಟ್ಕಳ ಹಾಗೂ ಸಿದ್ಧಾರ್ಥ ಸಂಯುಕ್ತ ಪದವಿಪೂರ್ವ ಕಾಲೇಜು, ಶಿರಾಲಿ ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆಗೈದಿದ್ದಾರೆ.

ಸಿದ್ಧಾರ್ಥ ಪದವಿಪೂರ್ವ ಕಾಲೇಜು, ಭಟ್ಕಳ
ವಿಜ್ಞಾನ ವಿಭಾಗ:
ಕುಮಾರ್ ತನ್ಮಯ್ ಶೇಟ್ 600ರಲ್ಲಿ 590 (98.33%) ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರ್ ಪ್ರತೀಕ್ ಚಿಪ್ಕರ್ ಹಾಗೂ ಕುಮಾರಿ ಭಾವನಾ ಪ್ರಭಾಕರ್ ನಾಯ್ಕ 586 (97.76%) ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆದರೆ, ಕುಮಾರಿ ಪ್ರತೀಕ್ಷಾ ದೇವಾಡಿಗ 585 (97.50%) ಅಂಕಗಳೊAದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ:
ಕುಮಾರ್ ಮಹೇಶ್ವರ ನಾಯ್ಕ 552 (92.00%) ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಕುಮಾರಿ ಸಹನಾ ಆರ್ ನಾಯ್ಕ 541 (90.16%) ಅಂಕಗಳೊAದಿಗೆ ದ್ವಿತೀಯ ಸ್ಥಾನ ಹಾಗೂ ಕುಮಾರ್ ಪ್ರೀತಮ್ ನಾಯ್ಕ 539 (89.83%) ಅಂಕಗಳೊAದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಸಿದ್ಧಾರ್ಥ ಸಂಯುಕ್ತ ಪದವಿಪೂರ್ವ ಕಾಲೇಜು, ಶಿರಾಲಿ ಈ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ.

ವಿಜ್ಞಾನ ವಿಭಾಗ:
ಕುಮಾರ್ ಗಣೇಶ್ ಕುಮಾರ್ ಆಚಾರಿ 587 (97.83%) ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ಕೌಶಲ್ಯಾ ಮಾದೇವ್ ನಾಯ್ಕ 575 (95.83%) ಅಂಕಗಳೊAದಿಗೆ ದ್ವಿತೀಯ ಸ್ಥಾನ ಹಾಗೂ ಕುಮಾರಿ ಪೂಜಾ ರಾಜು ನಾಯ್ಕ 574 (95.67%) ಅಂಕಗಳೊAದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ:
ಕುಮಾರ್ ಪ್ರತೀಶ್ ಪಿ.ಎನ್ 559 (93.17%) ಅಂಕಗಳೊAದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ಐಶ್ವರ್ಯ ಎನ್ ನಾಯ್ಕ ಮತ್ತು ಕೃತಿಕಾ ಆರ್ 554 (92.33%) ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆದರೆ, ಕುಮಾರ್ ವಿನಯ್ ಆರ್.ಸಿ 545 (90.83%) ಅಂಕಗಳೊAದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿಷಯವಾರು ವಿಶೇಷ ಸಾಧನೆ

ಭೌತಶಾಸ್ತ್ರದಲ್ಲಿ 6 ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ 1 ವಿದ್ಯಾರ್ಥಿ, ಗಣಿತದಲ್ಲಿ 10 ವಿದ್ಯಾರ್ಥಿಗಳು, ಗಣಕಯಂತ್ರ ವಿಜ್ಞಾನದಲ್ಲಿ 11 ವಿದ್ಯಾರ್ಥಿಗಳು, ಜೀವಶಾಸ್ತ್ರದಲ್ಲಿ 4 ವಿದ್ಯಾರ್ಥಿಗಳು, ಕನ್ನಡದಲ್ಲಿ 8 ವಿದ್ಯಾರ್ಥಿಗಳು ಹಾಗೂ ಹಿಂದಿಯಲ್ಲಿ 2 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆಗೈದಿದ್ದಾರೆ.

ಒಟ್ಟು ಫಲಿತಾಂಶ

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ
174 ಮಂದಿ ಡಿಸ್ಟಿಕ್ಷನ್
271 ಮಂದಿ ಪ್ರಥಮ ದರ್ಜೆ
12 ಮಂದಿ ದ್ವಿತೀಯ ದರ್ಜೆಪಡೆದು ಉತ್ತೀರ್ಣರಾಗಿದ್ದಾರೆ.

ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

About The Author

error: Content is protected !!