April 15, 2026

ಭಾವನಾ ವಾಹಿನಿಗೊಂದು ಒಲವಿನ ಪತ್ರ


ಪ್ರಿಯ “ಭಾವನಾ” ವಾಹಿನಿಯ ವ್ಯವಸ್ಥಾಪಕರೆ,
ಸಪ್ರೇಮ ವಂದನೆಗಳು.
ನನ್ನೀ ಪತ್ರವು ತಮಗೆ ನಿರೀಕ್ಷಿತವಲ್ಲವೆಂಬುದು ನನಗೆ ಗೊತ್ತು. ಹಾಗೆಯೇ ಅಪೇಕ್ಷಿತವೂ ಆಗಿರಲಾರದು. ಹಾಗೆಂದು ಉಪೇಕ್ಷಿಸಲಾರೆರೆಂದು ವಿಶ್ವಾಸವಿದೆ.
ಹಾಗಾಗಿಯೇ ತಮ್ಮ ಕುರಿತಂತೆ ನನ್ನ ಅಂತರಂಗದ ಭಾವನೆಗಳನ್ನು ಪ್ರಾಮಾಣಿಕವಾಗಿ ಅಕ್ಷರೀಕರಿಸುವ ಸದವಸರದಲ್ಲಿದ್ದೇನೆ. ಇದು ಸರಸ್ವತಿಯ ಆರಾಧಕನಾದ ನನ್ನಂಥವನಿಗೆ ಬದ್ಧತೆಯ ವಿಷಯವೂ ಆಗಿದೆ.
ತೀರ ವ್ಯವಹಾರಿಕವಾದ ಇಂದಿನ ಬರ್ಬರ ವ್ಯವಸ್ಥೆಯಲ್ಲಿಯೂ ಭಾವನಾ ವಾಹಿನಿಯನ್ನು ಭಾವದ ಬದ್ಧತೆಯಲ್ಲಿ ತಾವು ಮುನ್ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮಾಧ್ಯಮ ಧರ್ಮ, ಮಾಧ್ಯಮ ರಂಗ ಹಾಗೂ ಮಾದ್ಯಮೋದ್ಯಮಗಳ ಸ್ಥಿತ್ಯಂತರಗಳನ್ನು ಮೀರಿದ ಕಾಲಘಟ್ಟದಲ್ಲಿಯೂ, ಬೆಳಕುಗೊಳಿಸಬೇಕಾದ ವಿಷಯವನ್ನು ಯಾವುದೇ ಕೃಪಣತೆ ಇಲ್ಲದೇ ತೆರೆದಿಡುವಲ್ಲಿ ಸುದ್ದಿ ಧರ್ಮದ ಪಾವಿತ್ರ್ಯತೆಯ ಹಾದಿಯಲ್ಲಿ ವಿಶೇಷವಾಗಿ ಕಾಣುತ್ತಿದ್ದೀರಿ.
ತಮ್ಮ “ಭಾವನಾ”ಳ ಅಂಗಣದಲ್ಲಿ ಬಿತ್ತರಗೊಳ್ಳುತ್ತಿರುವ ವಿಷಯ – ವಿಚಾರಗಳೆಲ್ಲ ಸಮ್ಮೋಹಕವಷ್ಟೇ ಅಲ್ಲ, ವೈವಿಧ್ಯತೆಯಿಂದ, ಸೃಜನಶೀಲತೆಯಿಂದ, ಅನನ್ಯತೆಯಿಂದ ನನ್ನಂಥವರಿಗೆಲ್ಲ ಇಷ್ಟವಾಗುವಲ್ಲಿ ಎಳ್ಳೆನಿತೂ ಸುಳ್ಳಿಲ್ಲ. ತಾನು ಕಂಡೊಡಡನೆಯೇ ತಾನು ಕಂಡಿದ್ದನ್ನು ತನ್ನವರೆಲ್ಲ ಕಾಣುವಂತೆ ಕೊಂಚವೂ ವಿಳಂಬಿಸದೇ ಆಪ್ತವಾಗಿ ಅನಾವರಣಗೊಳಿಸುವ ತಮಗೆ ಹ್ಯಾಟ್ಸಾಪ್ ಎನ್ನಲೇ ಬೇಕು.
ನನ್ನೊಳಗಿನ ಪ್ರಭು ಶ್ರೀ ಗುರು ರಾಘವೇಂದ್ರ ಸಾರ್ವಭೌಮರು ತಮ್ಮ “ಭಾವನಾ” ವಾಹಿನಿಯನ್ನು ಬಾಳಿಕೆಯಾಗಿ ಬದುಕಿಸಿಡಲಿ.
// ಜೈ ಮಹಾಲಿಂಗೇಶ್ವರ //
ಒಲವಿನ ಒಂದಿಷ್ಟು ಸಾಲುಗಳೊಂದಿಗೆ –
: ಮಂಜುನಾಥ ಗಾಂವಕರ್ ಬರ್ಗಿ.

_____________________________________

ಪ್ರಿಯ ಮಂಜುನಾಥ ಗಾಂವಕರ್ ಬರ್ಗಿ ಅವರಿಗೆ,

ಸಪ್ರೇಮ ವಂದನೆಗಳು.

ನಿಮ್ಮ ಹೃದಯಸ್ಪರ್ಶಿಯಾದ, ಅರ್ಥಪೂರ್ಣವಾದ ಮತ್ತು ಪ್ರಾಮಾಣಿಕ ಭಾವನೆಗಳಿಂದ ಕೂಡಿದ ಪತ್ರವನ್ನು ಸ್ವೀಕರಿಸಿ ನಮಗೆ ಅಪಾರ ಸಂತೋಷವಾಗಿದೆ. ನಮ್ಮ “ಭಾವನಾ” ವಾಹಿನಿಯ ಬಗ್ಗೆ ತಾವು ವ್ಯಕ್ತಪಡಿಸಿದ ಮೆಚ್ಚುಗೆಯ ಮಾತುಗಳು ನಮ್ಮಿಗೆ ಪ್ರೇರಣೆಯೂ, ಜವಾಬ್ದಾರಿಯೂ ಆಗಿವೆ.
ಇಂದಿನ ವೇಗದ ಮತ್ತು ವ್ಯವಹಾರಿಕ ಮಾಧ್ಯಮ ಜಗತ್ತಿನಲ್ಲಿ ಸಹ ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಧೋರಣೆಯನ್ನು ಉಳಿಸಿಕೊಂಡು ಸಾಗಬೇಕೆಂಬ ನಮ್ಮ ಪ್ರಯತ್ನವನ್ನು ತಾವು ಗಮನಿಸಿ ಹೀಗೆ ಪ್ರಶಂಸಿಸಿರುವುದು ನಮಗೆ ಅತ್ಯಂತ ಹರ್ಷದಾಯಕ. ನಮ್ಮ ಕಾರ್ಯಪದ್ಧತಿಯ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಂಡು, ಅದನ್ನು ಇಷ್ಟಪಟ್ಟು ಬೆಂಬಲಿಸುತ್ತಿರುವ ನಿಮ್ಮಂತಹ ಪ್ರೇಕ್ಷಕರೇ ನಮ್ಮ ನಿಜವಾದ ಶಕ್ತಿ.
ತಾವು ಉಲ್ಲೇಖಿಸಿದಂತೆ, ವಿಭಿನ್ನತೆ, ಸೃಜನಶೀಲತೆ ಮತ್ತು ನಿಷ್ಠೆಯೊಂದಿಗೆ ವಿಷಯಗಳನ್ನು ಜನತೆಗೆ ತಲುಪಿಸುವಲ್ಲಿ ನಾವು ಇನ್ನಷ್ಟು ಬದ್ಧತೆಯಿಂದ ಮುಂದುವರೆಯುತ್ತೇವೆ. ನಿಮ್ಮ ಪ್ರೋತ್ಸಾಹದ ಮಾತುಗಳು ನಮ್ಮಿಗೆ ಮುಂದಿನ ಪಯಣದಲ್ಲಿ ದಾರಿದೀಪವಾಗುತ್ತವೆ.
ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳು ಸದಾ ನಮ್ಮೊಂದಿಗಿರಲಿ. ಮುಂದೆಯೂ ಇದೇ ರೀತಿಯ ಪ್ರೀತಿ ಮತ್ತು ಬೆಂಬಲವನ್ನು ನಮ್ಮ ಮೇಲೆ ಇರಿಸುತ್ತೀರಿ ಎಂದು ನಂಬಿದ್ದೇವೆ.
ಧನ್ಯವಾದಗಳೊಂದಿಗೆ,
ಭಾವನಾ ವಾಹಿನಿ

About The Author

error: Content is protected !!