ಮುರುಡೇಶ್ವರ: ಇಲ್ಲಿನ ಶಿಕ್ಷಣ ಸಂಸ್ಥೆಯಾದ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ದಿನಾಂಕ 06.04.2026 ರಿಂದ 18.04.2026 ರ ವರೆಗೆ 1 ರಿಂದ 9 ನೇ ತರಗತಿಯವರೆಗಿನ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಬೇಸಿಗೆ ಶಿಬಿರವನ್ನು ವಿಧ್ಯಾರ್ಥಿಗಳಿಂದ ವಿವಿಧ ಬಗೆಯ ಬೀಜಗಳನ್ನು ಬಿತ್ತನೆ ಮಾಡುವುದರ ಮೂಲಕ ಉದ್ಘಾಟಿಸಿದರು. ಈ ಬೇಸಿಗೆ ಸಿಬಿರಕ್ಕೆ ಅನೇಕ ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಸಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ,ಚಿತ್ರಕಲೆ, ಆರ್ಟ್&ಕ್ರಾಪ್ಟ್ ,ಪಬ್ಲಿಕ್ ಸ್ಪೀಚ್, ಸ್ಪೋಕನ್ ಇಂಗ್ಲೀಷ, ಸಂಗೀತ,ಕರಾಟೆ,ಆಟ್ಯಾ-ಪಾಟ್ಯಾ, ಅಭಾಕಸ್ ಮೊದಲಾದ ತರಬೇತಿಗಳನ್ನು ನೀಡಲಾಯಿತು.
ಬೇಸಿಗೆ ಶಿಬಿರದ ಕೊನೆಯ ದಿನವಾದ ಇಂದು ವಿದ್ಯಾರ್ಥಿಗಳು ತಾವು ಕಲಿತ ಕಲೆಗಳನ್ನು ಪ್ರದರ್ಶನ ಮಾಡಿದರು. ಬೇಸಿಗೆ ಶಿಬಿರದಿಂದ ವಿದ್ಯಾಥಿಗಳು ಪಡೆದ ಪ್ರಯೋಜನವನ್ನು ಗಮನಿಸಿದ ಪಾಲಕರು ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮಾನ್ಯ ಸಚಿವರು ಮೀನುಗಾರಿಕೆ, ಬಂದರು ಒಳನಾಡು ಜಲಸಾರಿಗೆ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಮಂಕಾಳ್ ಎಸ್ ವೈದ್ಯರವರು, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಆಡಳಿತ ನಿರ್ದೇಶಕಿಯವರಾದ ಡಾ.ಪುಷ್ಪಲತಾ ಮಂಕಾಳ್ ವೈದ್ಯರವರು ಸಿಹಿ ಹಂಚುವ ಶುಭ ಹಾರೈಸಿದರು.

More Stories
ಬೀನಾ ವೈದ್ಯ ಕಾಲೇಜಿನಲ್ಲಿ ಶೇ 100% ಫಲಿತಾಂಶ
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಎಪ್ರೀಲ್ 12 ಕ್ಕೆ “ಅಕ್ಷರ ಪರ್ವ” ಸ್ಕಾಲರ್ಶಿಪ್ ಪರೀಕ್ಷೆ.
ಮುರುಡೇಶ್ವರ ಶಿವ, ರಾಜಗೋಪುರ ಸ್ಥಳದಲ್ಲೆ ಒಂದೇ ಚಿತ್ರದಲ್ಲಿ ಅಚ್ಚರಿ ಮೂಡಿಸಿದ ಹೈದರಾಬಾದ್ ಮೂಲದ ಕಲಾವಿದೆ