ಕುಮಟಾ : ತುಮಕೂರಿನ ರಾಮಕೃಷ್ಣ – ವಿವೇಕಾನಂದ ಭಾವ ಪ್ರಚಾರ ಪರಿಷತ್ ನಿಂದ ಆಯೋಜಿಸಿದ ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ಭಾಗವಹಿಸಿ ರಾಂಕ್ ವಿಜೇತರಾದ ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಶೃದ್ಧಾ ಪಾಂಡುರಂಗ ಪಟಗಾರ, ಧನ್ಯ ಈಶ್ವರ ಪಟಗಾರ್ ಹಾಗೂ ನಂದನ ನಾರಾಯಣ ನಾಯಕರವರನ್ನು ಸ್ಥಳೀಯ ಗ್ರಾಮ ಪಂಚಾಯಿತದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠವು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ ಬರ್ಗಿ ಸಂಸ್ಕೃತೋತ್ಸವ – 2026 ರ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ವಿಶ್ರಾಂತ ಅಧ್ಯಾಪಕ ಮೋಹನ ಭಂಡಾರಿ, ಉದ್ಯಮಿ ತಿಮ್ಮಣ್ಣ ನಾಯಕ್ ಕುದ್ರಗಿ ಹಾಗೂ ಪತ್ರಕರ್ತ ಜಿ.ಡಿ. ಶಾನಭಾಗ್ ರವರು ಪ್ರಶಸ್ತಿ ಪ್ರದಾನವನ್ನು ಮಾಡಿದರು.
ಈ ವೇಳೆಯಲ್ಲಿ ಜಿಲ್ಲಾ ಪಂಚಾಯತದ ಮಾಜಿ ಸದಸ್ಯರಾದ ಪ್ರದೀಪ ನಾಯಕ್ ದೇವರಬಾವಿ, ಗಾಯತ್ರಿ ಗೌಡ, ತಾಲ್ಲೂಕಾ ಪಂಚಾಯತದ ಮಾಜಿ ಅಧ್ಯಕ್ಷೆ ವಿಜಯ ರಾಮ ಪಟಗಾರ, ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದ ಅಧ್ಯಕ್ಷ ಮಿರ್ಜಾನಿನ ಕನ್ನಡದ ಸಮೀರ, ಬರ್ಗಿ ಪ್ರೌಢ ಶಾಲೆಯ ಶ್ರೀ ಕಠವೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಜೈರಾಮ್ ನಾಯ್ಕ, ಕಾರ್ಯಕ್ರಮದ ಪ್ರಧಾನ ಸಂಘಟಕರಾದ ಕನ್ನಡ ಭಾರತಿ ಪ್ರಪಂಚದ ಸಂಚಾಲಕ ನಾಗನೆಲೆಯ ನಾರಾಯಣ ನಾಗು ನಾಯಕ್ ಹಾಗೂ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿ ಮೊದಲಾದವರಿದ್ದರು.

More Stories
ಮಸೂರಿನಲ್ಲಿ ಸಂಪನ್ನಗೊಂಡ ಸ್ಪೋಕನ್ ಇಂಗ್ಲೀಷ್ ಶಿಬಿರ ಕನ್ನಡದೊಂದಿಗೆ ಇಂಗ್ಲಿಷ್ ಮಾತಾಡಲು ಕನ್ನಡದ ಸಮೀರ್ ಕರೆ
ಬರ್ಗಿ ಸಂಸ್ಕೃತೋತ್ಸವದಲ್ಲಿ ರಾಮಾಯಣ ಪರೀಕ್ಷೆಯ ಸಾಧಕಿಯರಿಗೆ ಗೌರವ
ಹಿರೇಗುತ್ತಿ ಹೈಸ್ಕೂಲಿನಲ್ಲಿ ಅಂಬೇಡ್ಕರ್ ಜನ್ಮ ಜಯಂತಿ ಆಚರಣೆ