ಹೊನ್ನಾವರ : ತಾಲೂಕಿನ ಹೊಸಾಕುಳಿ ಗ್ರಾಮದ ದೊಡ್ಡಹಿತ್ತಲ್ ನಿವಾಸಿ ಶ್ರೀಪಾದ ನಾಯ್ಕ (52) ಶನಿವಾರ ಮಧ್ಯಾಹ್ನ ತೆಂಗಿನ ಮರದಿಂದ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಮನೆಯ ಸಮೀಪದಲ್ಲೆ ಇರುವ ತೋಟದಿಂದ ತೆಂಗಿನ ಮರದಿಂದ ಕಾಯಿ ಕೊಯ್ಯುವಾಗ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದರು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡ್ಯುಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಕಳೆದ 35 ಕ್ಕೂ ಅಧಿಕ ವರ್ಷದಿಂದ ಕವಲಕ್ಕಿ ಸನ್ನಿದಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಧಾರಿಯಾಗಿ ಗುರುಸ್ವಾಮಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ದಳ, ಒಕ್ಕೂಟದ ಪದಾಧಿಕಾರಿಯಾಗಿ ವಿವಿಧ ಸಂಘಟನೆಯ ಸದಸ್ಯರಾಗಿ ಜನಮನ್ನಣೆ ಪಡೆದಿದ್ದರು. ಮೃತರು ಪತ್ನಿ, ಒರ್ವ ಪುತ್ರಿ, ಒರ್ವ ಪುತ್ರ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾಲೂಕ ಆಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆ ನಡೆಸಿ ಮೃತದೇಹ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಈ ಸಂಭದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾ.ಪಂ.ಸದಸ್ಯ ಎಚ್.ಆರ್. ಗಣೇಶ, ಉದ್ದಿಮೆದಾರರದ ಎಸ್.ಕೆ.ನಾಯ್ಕ, ಸಂದೇಶ ಶೆಟ್ಟಿ ಸೇರಿದಂತೆ ಸಾರ್ವಜನಿಕರು, ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.
ವರದಿ ; ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಹೊನ್ನಾವರ: ವಿಶ್ವ ಕಾರ್ಮಿಕ ದಿನಾಚರಣೆ—ನಾನ್ ಕ್ಲಿನಿಕ್ ಸಿಬ್ಬಂದಿಗೆ ಗೌರವ
ವಿಜೃಂಭಣೆಯಿಂದ ಸಂಪನ್ನ ಗೊಂಡ ಮಂಕಾಳಮ್ಮ ದೇವಿಯ ಬಂಡಿ ಹಬ್ಬ
ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಗೆ 100% ಐಸಿಎಸ್ಇ ಫಲಿತಾಂಶ