ಮಂಗಸೂಳಿ/ಕಾಗವಾಡ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಸ್ಸಿ ಕಾಲೋನಿಯ ವಾರ್ಡ್ ನಂ. 6ರಲ್ಲಿ ಚರಂಡಿ ಸಮಸ್ಯೆ ತೀವ್ರ ಸ್ವರೂಪ ಪಡೆದಿದ್ದು, ಬಡ ಕುಟುಂಬವೊAದು ಮನೆ ಕುಸಿಯುವ ಭೀತಿಯಲ್ಲಿ ದಿನ ಕಳೆಯುವಂತಾಗಿದೆ. ಪಂಚಾಯತ್ ನಿರ್ಮಿಸಿರುವ ಚರಂಡಿಯಿAದ ನೀರು ಸೋರಿಕೆಯಾಗುತ್ತಿದ್ದು, ನಿವಾಸಿ ರೋಹಿಣಿ ರೋಹಿದಾಸ ಭಂಡಾರೆ ಅವರ ಮನೆಯ ಗೋಡೆಗಳು ಹಸಿಯಾಗಿ ಶೀತಲಗೊಂಡಿವೆ.

ಸAತ್ರಸ್ತ ಕುಟುಂಬವು ತಮ್ಮ ಮನೆಯ ದಿನಬಳಕೆಯ ನೀರು ಹಾಗೂ ಶೌಚಾಲಯದ ನೀರನ್ನು ಪೈಪ್ಲೈನ್ ಮೂಲಕ ಮುಖ್ಯ ಚರಂಡಿಗೆ ಹರಿಸಲು ಅವಕಾಶ ನೀಡಬೇಕೆಂದು ಮಂಗಸೂಳಿ ಗ್ರಾಮ ಪಂಚಾಯತ್, ಕಾಗವಾಡ ತಾಲೂಕು ಪಂಚಾಯತ್ ಹಾಗೂ ತಹಶೀಲ್ದಾರರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.
ಇನ್ನೂ ಆಶ್ಚರ್ಯದ ಸಂಗತಿಯೆAದರೆ, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌಧರಿ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದರೂ ಸಹ ಸಮಸ್ಯೆ ಬಗೆಹರಿಯದೆ ಉಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಬಿ.ಎಚ್. ಜಮಾದಾರ ಅವರ ಆದೇಶದ ಮೇರೆಗೆ ಅಥಣಿ ತಾಲೂಕು ಘಟಕದ ಮುಖ್ಯಸ್ಥರಾದ ಪ್ರವೀಣ ನಾಯಿಕ, ಅನೀಲ ಭಾಮನೆ, ಶರಣಪ್ಪ ಶಿಂದೆ ಹಾಗೂ ಎಂ.ಎA. ಶರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂಜಯ ಸೂರ್ಯವಂಶಿ ಅವರೊಂದಿಗೆ ಚರ್ಚಿಸಿ ತಕ್ಷಣ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಸಾಮಾಜಿಕ ಹೋರಾಟಗಾರ ಹಾಗೂ ಸಂಸ್ಥೆಯ ಮುಖ್ಯಸ್ಥ ಪ್ರವೀಣ ನಾಯಕ, ಸಾರ್ವಜನಿಕ ಚರಂಡಿ ಎಂದರೆ ಅದು ಎಲ್ಲರಿಗೂ ಸೇರಿದ್ದು. ಅಲ್ಲಿಗೆ ನೀರು ಹರಿಸಲು ಅವಕಾಶ ನಿರಾಕರಿಸುವುದು ಸರಿಯಲ್ಲ. ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ನೀಡುವ ಭರವಸೆ ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿಸಿದರು.
ಸಂತ್ರಸ್ತೆ ರೋಹಿಣಿ ಭಂಡಾರೆ ಮಾತನಾಡಿ, ನಮ್ಮ ಮನೆಯ ಹಿಂದೆ ಪಂಚಾಯತ್ ಚರಂಡಿ ನಿರ್ಮಿಸಿದೆ. ಅದರ ನೀರು ಗೋಡೆಗೆ ತಾಗಿ ಮನೆ ಶೀತಲಗೊಳ್ಳುತ್ತಿದೆ. ನಮ್ಮ ಮನೆಯ ನೀರನ್ನು ಪೈಪ್ ಮೂಲಕ ಚರಂಡಿಗೆ ಬಿಡಲು ಅವಕಾಶ ನೀಡುತ್ತಿಲ್ಲ. ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ನ್ಯಾಯ ಸಿಗುತ್ತಿಲ್ಲ. ಗೋಡೆ ಕುಸಿದು ಅನಾಹುತವಾದರೆ ಯಾರು ಹೊಣೆ ಎಂದು ಅಳಲು ತೋಡಿಕೊಂಡರು.
ಗ್ರಾಮಸ್ಥರು ಹಾಗೂ ಸಾಮಾಜಿಕ ಹೋರಾಟಗಾರರು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸಮಸ್ಯೆ ಇನ್ನಷ್ಟು ಗಂಭೀರವಾಗುವ ಮುನ್ನವೇ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ವರದಿ: ಮಹೇಶ್ ಶರ್ಮಾ,ಬೆಳಗಾವಿ

More Stories
ಬೈಲಹೊಂಗಲ ತಾಲೂಕಿನಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಮೂರ್ತಿಗಳ ವಿತರಣೆ
ವೃದ್ದಾಶ್ರಮದಲ್ಲಿ ಸರಳವಾಗಿ ರಾಜು ಕಾಗೆ ಜನ್ಮದಿನ ಆಚರಣೆ
ಅಥಣಿ ನಗರಾಭಿವೃದ್ಧಿ ಕುರಿತು ಮನವಿ : ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಒತ್ತಾಯ